ಕೊಳ್ಳೇಗಾಲ: ದಲಿತರಿಂದಲೇ ಅಂಬೇಡ್ಕರ್‌ ಭಾವಚಿತ್ರಕ್ಕೆ ಚಪ್ಪಲಿ ಹಾರ


Wednesday, February 1st, 2017 8:46 pm

ಕೊಳ್ಳೇಗಾಲ: ಪರಿಶಿಷ್ಟ ಜಾತಿಯಲ್ಲಿ ಅಂಬೇಡ್ಕರ್‌ನವರನ್ನು ದೇವರು ಎಂದು ಪೂಜೆ ಮಾಡುತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಅಂಬೇಡ್ಕರ್‌ ಹೆಸರನ್ನು ಹೇಳಿಕೊಂಡು ಕೆಟ್ಟ ಕೆಲಸ ಮಾಡುತ್ತಿರುವುದು ಇತ್ತೀಚಿಗೆ ಹೆಚ್ಚಾಗುತ್ತಿದೆ.

ಈ ನಡುವೆ ಕೊಳ್ಳೇಗಾಲದ ಮಸಿಭೀಮನಗರದ ಬಡಾವಣೆಯ ಮುಂಭಾಗದ ಅಂಬೇಡ್ಕರ್‌ ಕಮಾನಿಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಪೋಲಿಸರು ಯಶಸ್ವಿಯಾಗಿದ್ದಾರೆ.

ವಿಶೇಷವೆಂದರೆ ಬಂಧಿತ 6 ಮಂದಿ ಆರೋಪಿಗಳು ಕೂಡ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಬಂಧಿತರನ್ನು ಕೊಳ್ಳೇಗಾಲದ ತಾಲೂಕಿನ ನಿವಾಸಿಗಳಾದ ಪರಿಶಿಷ್ಟ ಜಾತಿಯ ಸ್ಟಾಲೀನ್ ಬಿನ್ ಸ್ಯಾಮುಯಲ್, ಶರತ್‍ಕುಮಾರ್ @ ಶರತ್ ಬಿನ್ ಬಸವರಾಜು, ಶಿವಸ್ವಾಮಿ @ ಶಿವು ಬಿನ್ ಶಿವಮೂರ್ತಿ ಅನಿಲ್ ಕುಮಾರ್ @ ಅನಿಲ ನವೀನ @ ಪಿಂಕಾ ಎಂದು ತಿಳಿದು ಬಂದಿದೆ.

ವಿಚಾರಣೆ ವೇಳೆ ಆರೋಪಿಗಳು ಅನ್ಯ ಗುಂಪಿನೊಂದಿಗೆ ಗಲಭೆ ಎಬ್ಬಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತಂದು ಈ ಮೂಲಕ ತಮ್ಮ ಗುಂಪಿನ ಪ್ರಾಬಲ್ಯವನ್ನು ಕೊಳ್ಳೇಗಾಲ ಪಟ್ಟಣದಲ್ಲಿ ಹೆಚ್ಚಿಸಿಕೊಳ್ಳುವ ಸಲುವಾಗಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ ಎಂದು ತಿಳಿದು ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions