ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಆರ್ಟ್ಸ್ ಪದವೀಧರರಿಗೂ ಇನ್ಫೋಸಿಸ್ ನಲ್ಲಿ ಭರ್ಜರಿ ಅವಕಾಶ


Wednesday, December 19th, 2018 8:05 am

ಬೆಂಗಳೂರು : ನಿರುದ್ಯೋಗಿಗಳಿಗೆ ಸಿಹಿಸುದ್ದಿ, ಸಾಫ್ಟ್ ವೇರ್ ಎಕ್ಸ್ ಪೋರ್ಟ್ ದೈತ್ಯ ಇನ್ಫೋಸಿಸ್, ಕಲೆ, ಡಿಜೈನ್ ಸ್ಕಿಲ್ಸ್ ಹಿನ್ನೆಲೆಯ ವಿದ್ಯಾರ್ಥಿಗಳು ಮತ್ತು ಎಂಜಿನಿಯರಿಂಗ್ ಯೇತರ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಹೌದು, ಇನ್ಫೋಸಿಸ್ ಹೊಸ ಡಿಜಿಟಿಲ್ ಅಪ್ಲಿಕೇಷನ್ಸ್ ಅಭಿವೃದ್ಧಿಯಲ್ಲಿ ಎಂಜಿನಿಯರಿಂಗ್ ಯೇತರ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಿದೆ. ಕಲಾ ವಿಭಾಗದಲ್ಲಿ ಓದಿದವರಿಗೆ ಹೆಚ್ಚಿನ ಸೃಜನಶೀಲ ಆಲೋಜನೆಗಳಿರುತ್ತವೆ. ಗ್ರಾಹಕರ ಸಮಸ್ಯೆಗಳಿಗೆ ಭಿನ್ನ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡಿದೆ.

ಹೊಸ ವ್ಯವಹಾರಗಳಲ್ಲಿ ಕ್ಲೈಂಟ್ ಗಳ ಬ್ಯುಸಿನೆಸ್ ಸಮಸ್ಯೆಗಳನ್ನು ನಿವಾರಿಸಲು ಹೆಚ್ಚಿನ ಕೌಶಲ್ಯ ಅಗತ್ಯವಿದೆ. ಇದನ್ನು ನಿಭಾಯಿಸಲು ವಿಜ್ಞಾನ-ತಂತ್ರಜ್ಞಾನ ಆಧರಿತ ಉದ್ಯೋಗಿಗಳಿಗಿಂತಲೂ ಆರ್ಟ್ಸ್ ಹಿನ್ನೆಲೆಯ ಉದ್ಯೋಗಿಗಳೇ ಉತ್ತಮ ಎಂದು ಕಂಪನಿಗಳು ಭಾವಿಸಿವೆ.

ಈ ಕೌಶಲ್ಯಗಳುಳ್ಳ ಉದ್ಯೋಗಿಗಳ ಅನ್ವೇಷಣೆಯನ್ನು ಕಂಪನಿ ಈಗಾಗಲೇ ಆರಂಭಿಸಿದೆ. ಕಳೆದ ವರ್ಷ7 ಸಾವಿರಕ್ಕೂ ಅಧಿಕ ಮಂದಿಯನ್ನು ಇನ್ಫೋಸಿಸ್ ನೇಮಕ ಮಾಡಿತ್ತು.ಇದರಲ್ಲಿ ಶೇ. 20-30 ರಷ್ಟು ಉದ್ಯೋಗಿಗಳು ಆರ್ಟ್ಸ್ ಮತ್ತು ಎಂಜಿನಿಯರಿಂಗ್ ಯೇತರ ಹಿನ್ನೆಲೆಯನ್ನು ಉಳ್ಳವರಾಗಿದ್ದಾರೆ. ಭಾರತದಲ್ಲೂ ಇಂಥದ್ದೇ ಪ್ರಯೋಗಕ್ಕೆ ಇನ್ಫೋಸಿಸ್ ಮುಂದಾಗಿದೆ ಎಂದು ಕಂಪನಿಯ ಡೇಟಾ ವಿಭಾಗದ ಮುಖ್ಯಸ್ಥ ಸತೀಶ್ ಹೆಚ್.ಸಿ. ಹೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions