ಭಾರತೀಯರು ತಮ್ಮ ಸಂಗಾತಿಗಳಿಗಿಂತ ಹೆಚ್ಚು ಇಷ್ಟಪಡುವುದು ಇದು ಅಂತೆ!


Wednesday, September 12th, 2018 6:14 am


ಸ್ಪೆಷಲ್ ಡೆಸ್ಕ್: ನಮ್ಮಲ್ಲಿ ಸ್ಮಾರ್ಟ್ ಫೋನ್ ಕ್ರೇಝ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಹೋಗುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಪಕ್ಕದಲ್ಲಿ ಗಂಡ ಅಥಾವ ಹೆಂಡತಿ ಮಲಗಿಕೊಂಡಿದ್ದರು ಕೂಡ ಅವರನ್ನು ನೋಡದೇ, ಮುದ್ದಾಡದೇ ಇರುವುಷ್ಟು ಮಟ್ಟಿಗೆ.

ಒಂದರ್ಥದಲ್ಲಿ ಹೇಳುವುದದಾರೇ ನಾವು ನಮ್ಮ ಸಂಗತಿಗಳಿಗಿಂತ ಹೆಚ್ಚಾಗಿ ರಮಿಸುವುದು, ಮುದ್ದಿಸುವುದು, ಅಪ್ಪಿಕೊಳ್ಳುವುದು, ನೋಡುವುದು ನಮ್ಮ ಜೊತೆಯಲ್ಲಿರುವ ಸ್ಮಾರ್ಟ್ ಫೋನ್ ಗಳನ್ನೇ ಬಿಡಿ.

ಅಂದ ಹಾಗೇ ಸೆಕ್ಸ್ ತ್ಯಜಿಸುತ್ತಿರುವ ನೆಟ್ ಹಾಗೂ ಚಾಟಿಂಗ್ ಪ್ರಿಯರು ವೀಕೆಂಡ್‌ನಲ್ಲಿ ಸಂಗಾತಿ ಬದಲಾಗಿ ತಮ್ಮ ಮೊಬೈಲ್ ಜತೆಗೇ ಮಲಗುತ್ತಿದ್ದಾರೆ ಅಂತ ಗ್ಲೋಬಲ್ ಪಬ್ಲಿಕ್ ಒಪೀನಿಯನ್ ರಿಸರ್ಚ್ ಕನ್ಸಲ್ಟೆನ್ಸಿ ಕೆಎಆರ್ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.

ಅಮೆರಿಕ, ಬ್ರಿಟನ್, ಬ್ರೆಜಿಲ್, ಚೀನಾ, ಸ್ಪೇನ್, ಮೆಕ್ಸಿಕೊ, ಭಾರತದ ಸುಮಾರು 7,112 ಸ್ಮಾರ್ಟ್‌ಫೋನ್ ಬಳಕೆದಾರರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಶೇ. 98ರಷ್ಟು ಭಾರತೀಯರು ತಮ್ಮ ಮೊಬೈಲ್ ಫೋನ್ ಜತೆ ಮಲಗುತ್ತಾರೆ. ಶೇ. 83ರಷ್ಟು ಜನರು ದಿನಪೂರ್ತಿ ಕೈನಲ್ಲೇ ಮೊಬೈಲ್ ಹಿಡಿದಿರುತ್ತಾರೆ ಎಂದು ವರದಿ ತಿಳಿಸಿತ್ತು.  ಸ್ಮಾರ್ಟ್‌ಫೋನ್ ಬಳಕೆದಾರರ ಪೈಕಿ ಶೇ. 60ರಷ್ಟು ಮಂದಿ ತಮ್ಮ ಸ್ಮಾರ್ಟ್‌ಫೋನ್ ಜತೆಗೆ ಮಲಗುತ್ತಿದ್ದಾರೆ. ಭಾರತದಲ್ಲಿ ಶೇ. 74ರಷ್ಟು ಮಂದಿ ಈ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಚೀನಾದಲ್ಲಿ ಈ ರೀತಿ ಚಟಕ್ಕೆ ಬಿದ್ದವರ ಸಂಖ್ಯೆ ಶೇ.70ರಷ್ಟಿದೆ ಎಂದು ಹೇಳಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions