ಸುಭಾಷಿತ :

Thursday, January 23 , 2020 5:59 PM

ಈ ವಸ್ತುಗಳನ್ನ ದಾನ ಮಾಡಿದರೇ ಏನಾಗುತ್ತದೆ..?


Wednesday, June 26th, 2019 7:47 am

ಸ್ಪೆಷಲ್‌ಡೆಸ್ಕ್: ಜೋತಿಷ್ಯ ಶಾಸ್ತ್ರದ ಪ್ರಕಾರ ನಾವು ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ಅದರಿಂದ ನಾವು ಅನೇಕ ಸಮಸ್ಯೆಗಳಿಗೆ ಗುರಿಯಾಗುತ್ತೇವೆ. ಹಾಗೆಯೇ ಹಲವು ರೀತಿಯಲ್ಲಿ ದಾರಿದ್ರ್ಯ ನಿಮ್ಮನ್ನು ಕಾಡಲಿದೆ. ದಾನ ಅನ್ನುವುದು ಒಂದು ಮಹಾ ಕೆಲಸ. ಆದರೆ ನಾವು ದಾನ ಮಾಡುವ ವಸ್ತುಗಳು ಯಾವುದು ಅನ್ನೋದು ತುಂಬಾ ಮುಖ್ಯ.

ಹರಿತವಾದ ಅಪಾಯಕಾರಿ ವಸ್ತುಗಳು : ಚಾಕು, ಕತ್ತರಿ, ಸೂಜಿಯಂತಹ ಹರಿತವಾದ ವಸ್ತುಗಳನ್ನು ದಾನ ಮಾಡಿದ್ರೆ ದಾರಿದ್ರ್ಯ ಬರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಜಗಳವಾಗುವ ಸಾಧ್ಯತೆಗಳಿರುತ್ತವೆ.

ಮುರಿದ ವಸ್ತುಗಳು : ಮುರಿದ ಆಟಿಕೆಗಳು ಮತ್ತು ಹರಿದ ಬಟ್ಟೆಗಳನ್ನು ಯಾರಿಗೂ ಕೊಡಬೇಡಿ. ಅಂಥಹ ವಸ್ತುಗಳನ್ನು ದಾನವಾಗಿ ಪಡೆದರೆ ಅವರು ಕೂಡ ಸಂತೋಷ ಪಡುವುದಿಲ್ಲ.

ಹಳಸಿದ ಆಹಾರ : ತಿನ್ನಲು ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ದಾನ ಮಾಡುವುದು ಸರಿಯಲ್ಲ. ಇದರಿಂದ ನೀವು ಕೋರ್ಟ್ ಪ್ರಕರಣಗಳಲ್ಲಿ ಸಿಕ್ಕು ಒದ್ದಾಡುವ ಸಾಧ್ಯತೆ ಇರುತ್ತದೆ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತದೆ.

ಪೊರಕೆ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೊರಕೆ ಲಕ್ಷ್ಮಿ ದೇವತೆಯನ್ನು ಕೆರಳಿಸುತ್ತಂತೆ. ಹಾಗಾಗಿ ಪೊರಕೆಯನ್ನು ದಾನ ಮಾಡಿದರೆ ಆರ್ಥಿಕ ನಷ್ಟವಾಗುತ್ತದೆ.

ಪ್ಲಾಸ್ಟಿಕ್ ವಸ್ತುಗಳು: ಬಕೆಟ್, ಕುರ್ಚಿ, ಕಸದ ಬುಟ್ಟಿಯಂತಹ ಪ್ಲಾಸ್ಟಿಕ್ ವಸ್ತುಗಳನ್ನು ಕೂಡ ದಾನ ಮಾಡಬೇಡಿ. ಅವುಗಳನ್ನು ದಾನ ಮಾಡುವುದರಿಂದ ನಿಮ್ಮ ವೃತ್ತಿ ಬದುಕಿಗೆ ತೊಡಕು ಉಂಟಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions