ಸುಭಾಷಿತ :

Sunday, January 26 , 2020 4:20 AM

ಸಚಿವ ಆರ್.ಶಂಕರ್ ಗೆ ಸಂಕಷ್ಟ : ಕಪಿಜೆಪಿ ಪಕ್ಷ ವಿಲೀನದ ಬಗ್ಗೆ ಸೂಕ್ತ ದಾಖಲೆ ಸಲ್ಲಿಸಲು ಸ್ಪೀಕರ್ ನೋಟೀಸ್.!


Wednesday, July 17th, 2019 6:43 pm


ಬೆಂಗಳೂರು : ಕಪಿಜೆಪಿ ಪಕ್ಷದ ಮೂಲಕ ಶಾಸಕರಾಗಿ ಆಯ್ಕೆಯಾದ ನಂತ್ರ, ಇತ್ತೀಚಿಗಷ್ಟೇ ಕಾಂಗ್ರೆಸ್ ಜೊತೆಗೆ ತಮ್ಮ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವನ್ನು ವಿಲೀನಗೊಳಿಸಿ, ಸಚಿವರಾಗಿದ್ದ ಸಚಿವ ಆರ್ ಶಂಕರ್ ಗೆ ಇದೀಗ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಪಕ್ಷದ ಜೊತೆ ಕೆಪಿಜೆಪಿ ಪಕ್ಷವನ್ನು ವಿಲೀನಗೊಳಿಸಿದ್ದ ಬಗ್ಗೆ, ಪಕ್ಷದ ವತಿಯಿಂದ ನಿರ್ಣಯ ಕಳಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ನೋಟೀಸ್ ಜಾರಿಮಾಡಿದ್ದಾರೆ.

ಇತ್ತೀಚಿಗೆ ಕೆಪಿಜೆಪಿಯಿಂದ ಗೆದ್ದು, ಕಾಂಗ್ರೆಸ್ ಗೆ ತಮ್ಮ ಬೆಂಬಲ ಆರ್ ಶಂಕರ್ ಗೆ ಸಚಿವ ಸ್ಥಾನವನ್ನು ನೀಡಿ, ತೃಪ್ತಿ ಪಡಿಸಿತ್ತು. ಆದರೇ ದೋಸ್ತಿಗೆ ಕೈ ಕೊಟ್ಟು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು. ಇದೀಗ ಇಂತಹ ಸಚಿವ ಆರ್ ಶಂಕರ್ ಅವರಿಗೆ ಸ್ಪೀಕರ್ ರಮೇಶ್ ಕುಮಾರ್ ಶಾಕ್ ನೀಡಿದ್ದಾರೆ. ತಾವು ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜೊತೆಗೆ ವಿಲೀನ ಮಾಡಿ, ಪತ್ರವನ್ನು ಸಲ್ಲಿಸಿದ್ದೀರಿ. ಆದರೇ ಅದಕ್ಕೆ ಯಾವುದೇ ಪೂರಕ ದಾಖಲೆ ಸಲ್ಲಿಸಿಲ್ಲ. ಪಕ್ಷದ ನಿರ್ಣಯವನ್ನು ಸಲ್ಲಿಸಿಲ್ಲ. ಹೀಗಾಗಿ ಕಾನೂನಿ ಮೇಲೆ ನಂಬಿಕೆ ಇದ್ದರೇ ದಾಖಲೆಗಳನ್ನು ಸಲ್ಲಿಸಿ ಎಂದು ನೋಟೀಸ್ ಜಾರಿ ಮಾಡಿದ್ದಾರೆ.

ಈ ಕುರಿತು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಧ್ಯಕ್ಷ ಮಹೇಶ್ ಗೌಡ ಪ್ರತಿಕ್ರಿಯಿಸಿದ್ದು, ತಮ್ಮ ಪಕ್ಷದಿಂದ ಗೆದ್ದು, ಸಚಿವರಾದ ಆರ್ ಶಂಕರ್, ತಮ್ಮ ಅನುಮತಿಯನ್ನೂ ಪಡೆಯದೇ, ಕಾಂಗ್ರೆಸ್ ಜೊತೆಗೆ ಪಕ್ಷವನ್ನು ವಿಲೀನ ಗೊಳಿಸುತ್ತಿರುವುದಾಗಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ನೀಡಿದ್ದರು. ಇದು ಕಾನೂನು ಭಾಹಿರವಾಗಿ ನಡೆದ ಪ್ರಕ್ರಿಯೆಯಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದೆನು. ಹೀಗಾಗಿ ಸಚಿವ ಆರ್ ಶಂಕರ್ ಅವರಿಗೆ ಈ ಸಂಬಂಧ ಸ್ಪೀಕರ್ ನೋಟೀಸ್ ಜಾರಿ ಮಾಡಿದ್ದಾರೆ ಎಂದು ತಿಳಿಸಿದರು.

ಸ್ಪೀಕರ್ ರಮೇಶ್ ಕುಮಾರ್ ನೋಟೀಸ್ ನಿಂದಾಗಿ ಇದೀಗ ಸಚಿವ ಆರ್ ಶಂಕರ್ ಅವರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೇ ನಾಳೆ ಸ್ಪೀಕರ್ ಅವರು ಆರ್ ಶಂಕರ್ ಅವರ ಶಾಸಕ ಸ್ಥಾನದ ಅನರ್ಹತೆಯ ಬಗ್ಗೆಯೂ ವಿಚಾರಣೆ ನಡೆಸುವುದರಿಂದ ಸಂಕಷ್ಟ ಎದುರಾಗಿದೆ. ಒಂದು ವೇಳೆ ತಪ್ಪು ಸಾಭೀತಾದರೇ ಸಚಿವ ಆರ್ ಶಂಕರ್ ಶಾಸಕ ಸ್ಥಾನದಿಂದ ಅನರ್ಹತೆಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions