2 ನೇ ಟೆಸ್ಟ್ ಪಂದ್ಯ : ವಿಂಡೀಸ್ ಗೆ ಆರಂಭಿಕ ಆಘಾತ


Friday, October 12th, 2018 11:34 am

ಹೈದರಾಬಾದ್ : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2 ನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ವಿಂಡೀಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಆರಂಭಿಕ ಆಘಾತ ಎದುರಿಸಿದೆ.

ಆರಂಭಿಕರಾದ ಕಿರಾನ್ ಪೊವೆಲ್ ಅವರು 22 ರನ್ ಗಳಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರೆ, ಬ್ರಾತ್ ವೈಟ್ 14 ರನ್ ಗೆ ಕುಲ್ದೀಪ್ ಎಸೆತದಲ್ಲಿ ಔಟ್ ಆಗಿದ್ದಾರೆ. ಸದ್ಯ ಶಾಯ್ ಹೋಪ್ ಹಾಗೂ ಹೆಟ್ ಮೆರೆ ಕ್ರೀಸ್ ನಲ್ಲಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions