ಸುಭಾಷಿತ :

Sunday, January 26 , 2020 4:16 AM

ಬಿಗ್ ನ್ಯೂಸ್ : ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ : ಜಾಧವ್ ಮರಣದಂಡನೆಗೆ ತಡೆ


Wednesday, July 17th, 2019 7:15 pm

ನೆದರ್ ಲ್ಯಾಂಡ್ : ಭಾರತ ಹಾಗೂ ಪಾಕಿಸ್ತಾನ ನಡುವೆ ಹಲವು ವರ್ಷಗಳಿಂದ ವಿವಾದದ ವಿಷಯವಾಗಿದ್ದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತಕ್ಕೆ ಮತ್ತೆ ವಿಜಯ ಸಿಕ್ಕಿದೆ.. ಜಾಧವ್ ಗೆ ನೀಡಿದ್ದ ಮರಣ ದಂಡನೆ ಶಿಕ್ಷೆಯನ್ನು ಮರು ಪರಿಶೀಲಿಸುವಂತೆ ಪಾಕ್ ಸೇನಾ ಕೋರ್ಟ್‍ಗೆ ಐಸಿಜೆ ನ್ಯಾಯಾಲಯ ಆದೇಶಿಸಿದೆ.. ಅಲ್ಲದೆ ಪರಿಣಾಮಕಾರಿ ಮರು ಪರಿಶೀಲನಾ ಕ್ರಮಗಳನ್ನು ಕೈಗೊಳ್ಳುವರೆಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ಭಾರಿ ಮುಖಬಂಗ ಉಂಟಾಗಿದೆ.

ಪಾಕಿಸ್ತಾನ ಕೋರ್ಟ್ ನಿಂದ ಭಾರತದ ಕುಲಭೂಷಣ್ ಜಾಧವ್ ಗೆ ವಿಧಿಸಿದ್ದ ಮರಣ ದಂಡನೆಯನ್ನು, ನೆದರ್ ಲ್ಯಾಂಡ್ ನ ಹೆಗ್ ನಲ್ಲಿರುವ ಅಂತರಾಷ್ಟ್ರೀಯ ಕೋರ್ಟ್, ಜಾಧವ್ ಗೆ ನೀಡಿದ್ದ ಮರಣ ದಂಡನೆ ಶಿಕ್ಷೆಯನ್ನು ಮರು ಪರಿಶೀಲಿಸುವಂತೆ ಪಾಕ್ ಸೇನಾ ಕೋರ್ಟ್‍ಗೆ ಐಸಿಜೆ ನ್ಯಾಯಾಲಯ ಆದೇಶಿಸಿದೆ.. ಅಲ್ಲದೆ ಪರಿಣಾಮಕಾರಿ ಮರು ಪರಿಶೀಲನಾ ಕ್ರಮಗಳನ್ನು ಕೈಗೊಳ್ಳುವರೆಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ. ಅಲ್ಲದೆ ಭಾರತಕ್ಕೆ ಕೌನ್ಸಿಲರ್ ಎಕ್ಸೆಸ್ ನೀಡಿದೆ.. ಜೊತಗೆ ಪ್ರಕರಣದಲ್ಲಿ ವಿಯನ್ನಾ ಒಪ್ಪಂದ ಉಲ್ಲಂಘನೆ ಆಗಿರೋದನ್ನ ಎತ್ತಿ ಹಿಡಿದಿರುವ ಘನ ನ್ಯಾಯಲಯ ಭಾರತದ ವಾದಕ್ಕೆ ಮನ್ನಣೆ ನೀಡಿದೆ. ಒಟ್ಟು 16 ನ್ಯಾಯಾಧೀಶರ ಪೈಕಿ 15 ನ್ಯಾಯಾಧೀಶರು ಭಾರತದ ವಾದವನ್ನು ಎತ್ತಿ ಹಿಡಿದಿದ್ದಾರೆ.

ತೀರ್ಪು ಓದುವ ವೇಳೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.. ನೆದರ್‍ಲ್ಯಾಂಡ್‍ನಲ್ಲಿರೋ ಭಾರತೀಯ ರಾಯಭಾರಿ ವೇಣು ರಾಜಮೋನಿ, ವಿದೇಶಾಂಗ ಇಲಾಖೆ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್ ಹೇಗ್‍ನಲ್ಲಿರೋ ನ್ಯಾಯಲಯದಲ್ಲಿ ಹಾಜರಿದ್ದು, ಆದೇಶಕ್ಕೆ ಸಾಕ್ಷಿಯಾದರು.. ಐಸಿಜೆಯಲ್ಲಿ ಭಾರತಕ್ಕೆ ಗೆಲುವು ಸಿಕ್ಕಿರೋದು ಅಂತರಾಷ್ಟೀಯ ಮಟ್ಟದಲ್ಲಿ ದೇಶಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ.

ಅಂದಹಾಗೆ ಏಪ್ರಿಲ್ 2017ರಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯ ಕುಲಭೂಷಣ್ ವಿರುದ್ಧ ಭಯೋತ್ಪಾದನೆ ಹಾಗೂ ಗೂಢಾಚಾರದ ಆರೋಪದ ಮೇಲೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು… ಈ ಕುರಿತು ಭಾರತ ತನ್ನ ಆಕ್ಷೇಪ ವ್ಯಕ್ತಪಡಿಸಿ ಅಂತರಾಷ್ಟ್ರೀಯ ನ್ಯಾಯಲಯದ ಮೊರೆ ಹೋಗಿತ್ತು. ಬಳಿಕ ವಿಚಾರಣೆ ನಡೆಸಿದ ಐಸಿಜೆ ನ್ಯಾಯಲಯ ಮರಣ ದಂಡನೆಗೆ ತಡೆ ನೀಡಿತ್ತು.. ಬಳಿಕ ಉಭಯ ರಾಷ್ಟ್ರಗಳಿಂದ ಐಸಿಜೆಯಲ್ಲಿ ವಾದ-ಪ್ರತಿವಾದ ನಡೆದಿತ್ತು… ಭಾರತದ ಪರವಾಗಿ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು.. ಇನ್ನು ಐಸಿಜೆಯಲ್ಲಿ 2017ರಲ್ಲಿ ಆರಂಭವಾಗಿದ್ದ ವಿಚಾರಣೆ ಬರೊಬ್ಬರಿ 2 ವರ್ಷ 2 ತಿಂಗಳು ನಡೆದಿದೆ.. ಇದೀಗ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸುವುದರೊಂದಿಗೆ ಜಾಧವ್ ಪ್ರಕರಣಕ್ಕೆ ಅಂತಿಮ ತೆರೆ ಬಿದ್ದಿದೆ.

ಇನ್ನು ಇತ್ತ ಜಾಧವ್ ಕೇಸ್‍ನಲ್ಲಿ ಭಾರತಕ್ಕೆ ಗೆಲುವು ಸಿಕ್ಕಿರುವಂತೆ ಅವರ ಕುಟುಂಬ ಸಂತಸ ವ್ಯಕ್ತಪಡಿಸಿದೆ.. ಶೀಘ್ರದಲ್ಲಿ ಮುಂದಿನ ಕಾರ್ಯಗಳಿಗೆ ಪಾಕ್ ಸೇನಾ ನ್ಯಾಯಲಯ ಮುಂದಾಗಲಿ ಅಂತ ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions