ಪತ್ನಿ ಛೇಡಿಸಿದ ಬೀದಿಕಾಮಣ್ಣನಿಗೆ ಪತಿ ಬಿತ್ತು ಗೂಸ


Monday, September 10th, 2018 3:08 pm


ಮೈಸೂರು: ಪತ್ನಿಗೆ ಛೇಡಿಸಿದ ಬೀದಿಕಾಮಣ್ಣನಿಗೆ ಪತಿ ಗೂಸಾ ನೀಡಿರುವ ಘಟನೆ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ನಡೆದಿದೆ. ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದ ನಾಗಿಣಿಯನ್ನು ಎನ್ನುವ ಮಹಿಳೆಯನ್ನು ಪ್ರತಿ ನಿತ್ಯ ಮಂಜು ಎನ್ನುವ ಬೀದ ಕಾಮಣ್ಣ ಚುಡಾಯಿಸುತ್ತಿದ್ದ ಎನ್ನಲಾಗಿದೆ.

ಇದೇ ವೇಳೆ ತನ್ನನ್ನು ಛೇಡಿಸುವ ಬಗ್ಗೆ ನಾಗಿಣಿ ತನ್ನ ಪತಿ ಗೆ ಹೇಳಿದ್ದಾಳೆ. ಈ ವೇಲೆ ವಿಚಾರ ತಿಳಿದ ನಾಗಿಣಿ ಪತಿ ರಮೇಶ್ ಗೌಡ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಬೃಂದಾವನ ಬಡಾವಣೆ ಬಳಿ ಮಂಜುನನ್ನು ಹಿಡಿದು ಸಾರ್ವಜನಿಕರ ಎದುರಲ್ಲೇ ಬಿಸಿ ಬಿಸಿ ಕಜ್ಜಾಯ ಕೊಟ್ಟಿದ್ದಾನೆ.

ನಂತರ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಮಂಜನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಗೂಸಾ ತಿಂದ ಬೀದಿ ಕಾಮಣ್ಣನನ್ನು ಪೊಲೀಸರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions