ಸಾರಿಗೆ ರುಚಿ ನೀಡುವ ಇಂಗು ಆರೋಗ್ಯವರ್ಧಕವು ಹೌದು


Tuesday, October 9th, 2018 1:00 pm

ಸ್ಪೆಷಲ್ ಡೆಸ್ಕ್ : ಮನೆಯಲ್ಲಿ ಸದಾ ಇರುವ ಇಂಗು ಯಾವುದೇ ತಕ್ಷಣದ ಅಗತ್ಯದ ಸಮಯದಲ್ಲಿ ಆಪತ್ಬಾಂಧವನಾಗುತ್ತದೆ. ಇದು ಹಲವಾರು ಅರೋಗ್ಯ ಸಮಸ್ಯೆಗಳನ್ನು ನಿವಾರಿಸಿ ಉತ್ತಮ ಅರೋಗ್ಯ ಹೊಂದಲು ಸಹಾಯಕವಾಗುತ್ತದೆ.

ಇಂಗು ಒಣಕೆಮ್ಮು ಮತ್ತು ಅಸ್ತಮಾ ರೋಗಗಳಿಗೆ ಔಷಧದಂತೆ ಕೆಲಸ ಮಾಡುತ್ತದೆ.
ಎದೆ ಮತ್ತು ಗಂಟಲಲ್ಲಿ ಕಟ್ಟಿಕೊಂಡಿರುವ ಕಫವನ್ನು ಕರಗಿಸಿ ನಿವಾರಿಸಲು ಪ್ರಚೋದಕದಂತೆ ವರ್ತಿಸುವ ಮೂಲಕ ಕಫದ ನಿವಾರಣೆಗೆ ಸಹಕರಿಸುತ್ತದೆ.
ಅಜೀರ್ಣ, ಅಪಾನವಾಯು, ಕರುಳಿನಲ್ಲಿ ಕಚ್ಚಿಕೊಂಡಿರುವ ಲಾಡಿಹುಳ ಮೊದಲಾದ ಕ್ರಿಮಿಗಳು, ಮಲವಿಸರ್ಜನೆಯ ಸಮಯದಲ್ಲಿ ಉರಿ ಮೊದಲಾದ ತೊಂದರೆಗಳನ್ನು ಇಂಗು ನಿವಾರಿಸುತ್ತದೆ.
ಇದರ ಉರಿಯೂತ ನಿವಾರಕ ಗುಣ ತಲೆನೋವನ್ನು ನಿವಾರಿಸಲೂ ಉತ್ತಮವಾಗಿದೆ. ಒಂದು ಕಪ್ ಉಗುರುಬೆಚ್ಚನೆಯ ನೀರಿಗೆ ಚಿಟಿಕೆ ಇಂಗು ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ಸಾಕು. ತಲೆನೋವು ನಿವಾರಣೆಯಾಗುತ್ತದ್ದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions