ಸುಭಾಷಿತ :

Sunday, January 26 , 2020 4:18 AM

ಇವಿಷ್ಟು ಮಾಡಿದ್ರೆ ಸಾಕು… ಎವರ್ ಗ್ರೀನ್ ಯಂಗ್ ಲುಕ್ ನಿಮ್ಮದಾಗುತ್ತೆ


Tuesday, July 16th, 2019 10:24 am

ಸ್ಪೆಷಲ್ ಡೆಸ್ಕ್ : ವಯಸ್ಸು ಎಷ್ಟಾದರೂ ಆಗಲಿ ಸದಾ ನಿಮ್ಮ ಮುಖದಲ್ಲಿ ಹೊಳಪು ಮೂಡಿ, ಯಂಗ್ ಆಗಿರಲು ಪ್ರತಿದಿನದ ನಿಮ್ಮ ಅಭ್ಯಾಸ ಹವ್ಯಾಸಗಳಲ್ಲಿ ಬದಲಾವಣೆಗಳನ್ನು ತಂದರೆ ಸಾಕು. ಅದಕ್ಕಾಗಿ ಮಾಡಬೇಕಾದ್ದು ಏನು? ನೋಡೋಣ…

ನಿದ್ರೆ : ಶರೀರದ ಶಕ್ತಿ ಹೆಚ್ಚಿಸಲು ಹಾಗೂ ಆರೋಗ್ಯಯುತವಾಗಿರಲು ಸರಿಯಾದ ನಿದ್ರೆ ಅಗತ್ಯ. ಪ್ರತಿ ದಿನ ಏಳರಿಂದ ಎಂಟು ಗಂಟೆಗಳ ನಿದ್ರೆ ಪಡೆದುಕೊಳ್ಳುವುದು ಅತ್ಯಗತ್ಯ. ಇದರಿಂದ ಶರೀರ ಆರೋಗ್ಯಯುತವಾಗಿರುತ್ತದೆ. ಅಲ್ಲದೆ ತುಂಬಾ ಸಮಯದವರೆಗೂ ಯಂಗ್‌ ಆಗಿ ಕಾಣಬಲ್ಲಿರಿ.

ಹವ್ಯಾಸ : ಪ್ರತಿ ದಿನ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಬೆಳಗ್ಗೆ ಎದ್ದೇಳುವುದು, ವ್ಯಾಯಾಮ ಮಾಡುವುದು, ಪಾರ್ಕ್‌ನಲ್ಲಿ ನಡೆದಾಡುವುದು… ಇವೆಲ್ಲಾ ಹವ್ಯಾಸವನ್ನು ಪ್ರತಿದಿನ .

ಹೀಗೆ ಮಾಡಿ : ಕೆಲಸದ ನಡುವೆ ಆಗಾಗ ನಿದ್ರೆ ಮಾಡಿದರೆ ದೈಹಿಕ ಶಕ್ತಿ ಕುಂದುತ್ತದೆ. ಇದರ ಬದಲಾಗಿ ನೀವು ಇತರ ಕೆಲಸಗಳನ್ನು ಅಂದರೆ ಇಷ್ಟವಾದ ಹವ್ಯಾಸಗಳಲ್ಲಿ ನಿಮ್ಮ ನೀವು ತೊಡಗಿಸಿ. ಇದರಿಂದ ಶರೀರ ಸಕ್ರಿಯವಾಗುತ್ತದೆ.

ರಾತ್ರಿ ಕಾಫಿ ಬೇಡ : ರಾತ್ರಿಯಂತೂ ಕಾಫಿ ಕುಡಿಯಲೇಬೇಡಿ. ಕಾಫಿಯಲ್ಲಿರುವ ಆಮ್ಲೀಯ ಗುಣ ಮತ್ತು ಆಹಾರದಲ್ಲಿರುವ ಪ್ರೋಟಿನ್ ಜೀರ್ಣ ಕ್ರಿಯೆ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಬೇಗನೆ ವಯಸ್ಸಾದಂತೆಯೂ ಕಾಣುತ್ತದೆ.

ಆಹಾರ ಸೇವನೆ : ಪೌಷ್ಟಿಕ ಆಹಾರ ಸೇವನೆ ಮಾಡಿ. ಆದರೆ ತಪ್ಪಿಯೂ ಓವರ್‌ ಡಯಟ್‌ ಮಾಡಬೇಡಿ. ಓವರ್‌ ಡಯಟ್‌ ಮಾಡುವುದರಿಂದ ನಿದ್ರೆಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ.

ವ್ಯಾಯಾಮ  : ಪ್ರತಿ ದಿನ ತಪ್ಪದೆ ಕನಿಷ್ಟ ಪಕ್ಷ 20 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಇದರಿಂದ ನಿಮಗೆ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ದಿನವಿಡೀ ಫ್ರೆಶ್‌ ಆಗಿರಬಹುದು

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions