-->

ಬಿಗ್ ನ್ಯೂಸ್ : ಯಡಿಯೂರಪ್ಪ ಹೇಳಿಕೆಗೆ ಟಾಂಗ್ ನೀಡಿದ ಸಿಎಂ ಕುಮಾರಸ್ವಾಮಿ


Monday, January 14th, 2019 9:21 pm

ಬೆಂಗಳೂರು : ಜೆಡಿಎಸ್‌ ನವರೇ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಯಡಿಯೂರಪ್ಪ ಸುಳ್ಳು ಹೇಳುವುದನ್ನು ಮೊದಲು ಬಿಡಲಿ. ಮುಂಬೈನಲ್ಲಿ ಯಾರ್ಯಾರ ಹೆಸರಲ್ಲಿ ರೂಮ್ ಬುಕ್ ಆಗಿದೆ ಎಂದು ನನಗೆ ಗೊತ್ತಿದೆ. ಬಿಜೆಪಿ ನಾಯಕರ ಹೆಸರಿನಲ್ಲಿ ರೂಮ್ ಬುಕ್ ಆಗಿರುವುದಕ್ಕೆ ನನ್ನ ಬಳಿ ಎಲ್ಲಾ ಮಾಹಿತಿ ಎಂದರು.

ನಾನು ಬಿಜೆಪಿಯ ಯಾವುದೇ ಶಾಸಕರನ್ನು ಸಂಪರ್ಕಿಸಿಲ್ಲ. ಸಂಪರ್ಕ ಮಾಡಿದ್ದರೆ ಆ ಕುರಿತು ವಿಷಯ ಬಹಿರಂಗಡಿಸಲಿ. ಅದನ್ನು ಬಿಟ್ಟು ಯಡಿಯೂರಪ್ಪ ಸುಳ್ಳು ಹೇಳೋದು ಬೇಡ ಎಂದು ಟಾಂಗ್ ನೀಡಿದರು. ನನಗೆ 120 ಶಾಸಕರ ಬೆಂಬಲ ಇದೆ. ಯಾವ ಕಾಂಗ್ರೆಸ್ ಶಾಸಕರು ಕೂಡ ನಾಟ್ ರೀಚೇಬಲ್ ಆಗಿಲ್ಲ ಎಂದರು.

‘ನಮ್ಮ ಶಾಸಕರೊಬ್ಬರನ್ನು ಸೆಳೆಯಲು ಆಮಿಷ ಒಡ್ಡಲಾಗಿದೆ. ಸಚಿವರನ್ನು ಮಾಡುತ್ತೇವೆ. ಕಾಣಿಕೆಗಳನ್ನು ನೀಡುತ್ತೇವೆ ಎಂಬ ಆಮಿಷಗಳನ್ನು ಒಡ್ಡಲಾಗುತ್ತಿದೆ’ ಎಂದು ನವದೆಹಲಿಯಲ್ಲಿ ಯಡಿಯೂರಪ್ಪ ಹೇಳಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions