ವಿವಾದದ ಕಿಡಿ ಹೊತ್ತಿಸಿದೆ ಸಿಎಂ ಹೆಚ್ಡಿಕೆ ಕರೆ ನೀಡಿರುವ ಮಾತು!


Thursday, September 20th, 2018 5:09 pm

ಹಾಸನ:  ಸಿಎಂ ಹೆಚ್ಡಿಕೆ ಅವರು ದೋಸ್ತಿ ಸರ್ಕಾರವನ್ನು ಅಲುಗಾಡಿಸುತ್ತಿರುವ ಬಿಜೆಪಿ ವಿರುದ್ದ ದಂಗೆ ಏಳುವಂತೆ ಕರೆ ನೀಡಿರುವ ಮಾತೊಂದು ರಾಜ್ಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಸಿಎಂ ವಿರುದ್ದ ಅನೇಕ ಜನರು ಕಿಡಿಕಾರುತ್ತಿದ್ದಾರೆ.

ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಹೆಚ್ಡಿಕೆ ಈ ಪುಣ್ಯ ಭೂಮಿಯಿಂದ ನಾನು ನಾಡಿನ ಜನತೆಗೆ ಕರೆ ನೀಡುತ್ತಿದ್ದೇನೆ. ರಾಜ್ಯದ ಜನತೆಗೆ ಒಳ್ಳೆ ಆಡಳಿತ ನೀಡುವ ಉದ್ದೇಶದಿಂದ ನಾನು ಇರುವೆ, ಒಂದು ವೇಳೆ ನಾನು ಕೂಡ ತಪ್ಪು ಮಾಡಿದರೆ ನನ್ನ ವಿರುದ್ದ ಕೂಡ ಜನ ದಂಗೆ ಏಳಿ ಅಂತ ಹೇಳಿದರು.

ಇದೇ ವೇಳೆ ಅವರು ರೇವಣ್ಣ ಭೂಕಬಳಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಕೂಡಲೇ ಡಿಸಿಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಈ ಬಗ್ಗೆ ಅಧಿಕಾರಿಗಳೇ ದಾಖಲೆ ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions