ತಮ್ಮ ಕುಟುಂಬದವರ ವಿರುದ್ದ ಅಕ್ರಮ ಭೂ ಕಬಳಿಕೆ ಆರೋಪ : ಸಿಎಂ ಹೆಚ್ಡಿಕೆ ಹೇಳಿದ್ದೇನು?


Thursday, September 20th, 2018 3:28 pm


ಹಾಸನ: ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡರ ಕುಟುಂಬ ಸರ್ಕಾರಿ ಭೂಮಿಯನ್ನು ಕಬಳಿಸಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್​ ಮುಖಂಡ ಎ. ಮಂಜು ಆರೋಪ ಗಂಭೀರ ಆರೋಪ ಮಾಡಿದ್ದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. 

ಹಾಸನ ತಾಲೂಕಿನ ದುದ್ದ ಹೋಬಳಿಯ ಸೋಮನಹಳ್ಳಿ ಕಾವಲಿನಲ್ಲಿರುವ 54 ಎಕರೆ ಸರ್ಕಾರಿ ಜಾಗವನ್ನು ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಗೂ ಅತ್ತೆ ಕಾಳಮ್ಮನವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ತಮ್ಮ ಕುಟುಂಬದ ವಿರುದ್ದ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಇಂದು ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಸಿಎಂ ಹೆಚ್ಡಿ ಕುಮಾರ್‍ ಸ್ವಾಮಿಯವರು ಈಗಾಗಲೇ ಹಾಸನ ಜಿಲ್ಲಾಧಿಕಾರಿ ರೋಹಿಣಿಯವರ ಜೋತೆ ಮಾಹಿತಿ ತೆಗೆದುಕೊಂಡಿದ್ದೆನೆ, ನಮ್ಮ ಅಧಿಕಾರಿಗಳು ಸತ್ಯ ಸತ್ಯತೆಯನ್ನು ಬಿಡುಗಡೆ ಮಾಡಲಿದ್ದಾರೆ, ತಪ್ಪು ಮಾಡಿದ್ದರೇ ನಮ್ಮ ಕುಟುಂಬದವರಾಗಲಿ, ಯಾರೇ ಅಗಲಿ ತಪ್ಪು ಮಾಡಿದರೆ ಅವರ ವಿರುದ್ದ   ಕ್ರಮ ತೆಗೆದುಕೊಳ್ಳುತ್ತೆನೆ ಅಂತ ಸ್ಪಷ್ಟಪಡಿಸಿದರು

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions