ಬಿಜೆಪಿಯ ಮೈ ಭಿ ಚೌಕಿದಾರ್ ಅಭಿಯಾನಕ್ಕೆ ಟಾಂಗ್: ಟ್ವಿಟರ್ ಖಾತೆಯಲ್ಲಿ ತನ್ನ ಹೆಸರನ್ನು ’ಬೇರೋಜ್ಗಾರ್’ ಅಂತ ಬದಲಾಯಿಸಿಕೊಂಡ ಹಾರ್ದಿಕ್ ಪಾಟೇಲ್‌


Tuesday, March 19th, 2019 2:35 pm


ನವದೆಹಲಿ: ಪಾಟೀದಾರ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ತಮ್ಮ ಟ್ವಿಟರ್ ಖಾತೆಯ ಹೆಸರಿಗೆ ಬೇರೋಜ್ಗಾರ್ ಹಾರ್ದಿಕ್ ಪಾಟೇಲ್‌ ( ನಿರುದ್ಯೋಗಿ ) ಅಂತ ಬದಲಾಯಿಸಿಕೊಂಡಿದ್ದು, ಈ ಮೂಲಕ ಬಿಜೆಪಿಯ ಮೈಭಿ ಚೌಕಿದಾರ್ ಅಭಿಯಾನಕ್ಕೆ ಟಾಂಗ್ ನೀಡಿದ್ದಾರೆ.

ಇದಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಹಾರ್ದಿಕ್ ಅವರನ್ನು ಅನುಸರಿಸಿರುವ ಹಲವರು ಕೂಡ ತಮ್ಮ ಟ್ವಿಟರ್‌ ಖಾತೆಯಲ್ಲಿ ತಮ್ಮ ಟ್ವಿಟರ್ ಹೆಸರಿನ ಅರಂಭದಲ್ಲಿ ಬೇರೋಜ್ಗಾರ್ ಅಂತ ಸೇರಿಸಿಕೊಂಡು ಹಾರ್ದಿಕ್ ಪಾಟೇಲ್‌ರನ್ನು ಬೆಂಬಲಿಸಿಕೊಂಡಿದ್ದಾರೆ.ಇನ್ನು ಗುಜರಾತ್‌ನ ಜಾಮ್‌ನಗರ್ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ವತಿಯಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions