ನೀಳವಾದ ಹಾಗೂ ದಟ್ಟ ಕೂದಲು ನಿಮ್ಮದಾಗಲೂ ಈ ಟಿಪ್ಸ್ ಗಳನ್ನು ನಿಮ್ಮದಾಗಿಸಿ


Wednesday, December 12th, 2018 12:18 pm

ಸ್ಪೆಷಲ್ ಡೆಸ್ಕ್ : ಹುಡುಗಿಯರಿಗೆ ಉದ್ದವಾದ ಹಾಗೂ ದಟ್ಟವಾದ ಕೂದಲು ತಮ್ಮದಾಗಬೇಕೆಂಬ ಅಸೆ ಇರುತ್ತದೆ. ನೀವು ನೀಳ ಕೂದಲ ಸುಂದರಿಯಾಗ ಬಯಸಿದರೆ ಈ ಟಿಪ್ಸ್ ನಿಮ್ಮದಾಗಿಸಿ…

  • 10-15 ಸೀಬೆ ಎಲೆ ತೆಗೆದುಕೊಂಡು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಅರ್ಧ ಲೀಟರ್ ನೀರು ಹಾಕಿ ಚೆನ್ನಾಗಿ ನಿಮಿಷ ಕುದಿಸಿ. ಆ ನೀರು ತಣ್ಣಗಾದ ಮೇಲೆ ಅದನ್ನು ಸೋಸಿ ಅದನ್ನು ತಲೆಗೆ ಹಾಕಿ 10- 15 ನಿಮಿಷ ಮಸಾಜ್ ಮಾಡಬೇಕು. ಇದರಿಂದ ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯುತ್ತೆ.
  • ಕರಿಬೇವಿನ ಎಲೆಗಳನ್ನು ಅರೆದು ಮಾಡಿದ ದ್ರವ ಕೂದಲಿಗೆ ಬುಡಕ್ಕೆ ಹಚ್ಚಿದರೆ ಕೂದಲು ದಟ್ಟವಾಗಿ ಹಾಗೂ ನೀಳವಾಗಿ ಬೆಳೆಯುತ್ತದೆ.
  • ಮೊಟ್ಟೆಯ ಹಳದಿ ಭಾಗವನ್ನ ಕೂದಲಿಗೆ ಹಚ್ಚಿ, ಸ್ವಲ್ಪ ಗಂಟೆಗಳ ಕಾಲ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ. ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
  • ಈರುಳ್ಳಿ ರಸವನ್ನು ತೆಗೆದು ಅದನ್ನು ಕೂದಲಿನ ಬುಡಕ್ಕೆ ಹಚ್ಚಿ, ನಂತರ ಸ್ನಾನ ಮಾಡಿ ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
  • ಕೊಬ್ಬರಿ ಎಣ್ಣೆಯಲ್ಲಿ ನೆಲ್ಲಿಕಾಯಿ ಪುಡಿ, ಮೆಂತ್ಯ ಪುಡಿ, ದಾಸವಾಳ ಹೂ, ಕರಿಬೇವು ಇವುಗಳಲ್ಲಿ ಯಾವುದಾದರೂ ಒಂದನ್ನು ಹಾಕಿ, ಬಿಸಿ ಮಾಡಿ ಸೋಸಿ ಆಗಾಗ್ಗೆ ಕೂದಲಿಗೆ ಹಚ್ಚಿ. ಇದರಿಂದಲೂ ಕೂದಲು ದಟ್ಟ ಮತ್ತು ನೀಳವಾಗಿ ಬೆಳೆಯುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions