ಸುಭಾಷಿತ :

Saturday, October 19 , 2019 4:37 PM

ಸಿಎಂ ಕುಮಾರಸ್ವಾಮಿ ವಿರುದ್ಧ ಮತ್ತೊಮ್ಮೆ ಸಿಡಿದ `ಹಳ್ಳಿ ಹಕ್ಕಿ’ ಹೇಳಿದ್ದೇನು?


Tuesday, June 18th, 2019 12:43 pm

ಬೆಂಗಳೂರು : ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ವಿಶ್ವನಾಥ್ ಮತ್ತೊಮ್ಮೆ ಗರಂ ಆಗಿದ್ದು, ಪ್ರಮಾಣ ವಚನ ಸ್ವೀಕರಿಸಿದ್ದರೂ ಇನ್ನೂ ಸಚಿವ ಸ್ಥಾನ ನೀಡದೇ ದಲಿತರು ಹಾಗೂ ಹಿಂದುಳಿದವರನ್ನು ಅವಮಾನ ಮಾಡಬೇಡಿ ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ಮೀಸಲು ಕ್ಷೇತ್ರವಾದ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಹೆಚ್. ನಾಗೇಶ್ ಹಾಗೂ ರಾಣೆಬೆನ್ನೂರು ಕ್ಷೇತ್ರದ ಶಾಸಕ ಆರ್.ಶಂಕರ್ ಅವರನ್ನು ನೂತನ ಸಚಿವರನ್ನಾಗಿ ಘೋಷಿಸಲಾಯಿತು. ಅಲ್ಲದೇ ಇಬ್ಬರಿಗು ಪ್ರಮಾಣ ವಚನವನ್ನು ನೀಡಲಾಯಿತು. ಆದರೆ, ಈವರೆಗೆ ಅವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ಈ ಕುರಿತು ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹಳ್ಳಿ ಹಕ್ಕಿ ವಿಶ್ವನಾಥ್ ಅವರು ಕಿಡಿಕಾರಿದ್ದಾರೆ.

ಮುಳಬಾಗಿಲು ಕ್ಷೇತ್ರದ ಶಾಸಕ ಹೆಚ್.ನಾಗೇಶ್ ಹಿಂದುಳಿದ ಸಮಾಜಕ್ಕೆ ಸೇರಿದವರು. ಇವರಿಗೆ ಸಚಿವ ಸ್ಥಾನ ನೀಡಲಾಗಿದೆ. ಪ್ರಮಾಣ ವಚನವನ್ನೂ ಮಾಡಿಸಲಾಗಿದೆ. ಆದರೆ, ಈವರೆಗೆ ಅವರಿಗೆ ಯಾವ ಖಾತೆಯನ್ನೂ ನೀಡಲಾಗಿಲ್ಲ. ಪ್ರಮಾಣ ವಚನ ಆಗಿಯೂ ಇನ್ನೂ ಖಾತೆ ನೀಡದಿರುವುದು ಒಂದು ರೀತಿ ಅವಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions