ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ನೀಡಿದ ಶತಾಯುಷಿ ಶ್ರೀ ಶಿವಕುಮಾರ ಶ್ರೀ


Wednesday, February 14th, 2018 4:21 pm

ತುಮಕೂರು: ಸಿದ್ದಗಂಗಾ ಮಠದ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವವು ಇಂದು ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ಅದ್ಧೂರಿಯಾಗಿ ನೆರವೇರಿತು.

ಶತಾಯುಷಿ ಶ್ರೀ ಶಿವಕುಮಾರ ಶ್ರೀಗಳು ಮಧ್ಯಾಹ್ನ 11.48ರ ಅಭಿಜಿತ್ ಲಗ್ನದ ಮುಹೂರ್ತದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದರು. ಹಳೆ ಮಠದ ಪ್ರಾಂಗಣದಿಂದ ಸುಮಾರು 100 ಮೀಟರ್‌ವರೆಗೆ ಭಕ್ತರು ತೇರನ್ನು ಎಳೆದು ಸಿದ್ದಲಿಂಗೇಶ್ವರ ಸ್ವಾಮಿಯ ಕೈಪೆಗೆ ಪಾತ್ರರಾದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಕೂಡಾ ತೇರನ್ನು ಎಳೆದು ಭಕ್ತಿಯ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ಅತ್ತ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಭಕ್ತಾದಿಗಳು ರಥಕ್ಕೆ ಬಾಳೆಹಣ್ಣು, ಬಿಲ್ವಪತ್ರೆ ಎಸೆದು ಕೃತಾರ್ಥರಾದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions