ಗುಡ್ ನ್ಯೂಸ್: ಕೇಂದ್ರದಿಂದ ಖಾಸಗಿ ವಲಯದ ಉದ್ಯೋಗಿಗಳಿಗೆ ಸರ್ಕಾರಿ ಕೆಲಸಕ್ಕೆ ಆಹ್ವಾನ


Sunday, June 10th, 2018 8:39 pm

ನವದೆಹಲಿ: ಖಾಸಗಿ ವಲಯದಲ್ಲಿ ಕೆಲಸ ಮಾಡಿದ ಪ್ರತಿಭಾವಂತರನ್ನು ಸರ್ಕಾರಿ ಕೆಲಸಕ್ಕೆ ಕರೆತರುವ ನಿಟ್ಟಿನಲ್ಲಿ ಮೋದಿ ಸರಕಾರ ಮುಂದಾಗಿದ್ದು ತನ್ನ ‘ಪಾರ್ಶ್ವ ಪ್ರವೇಶ’ ಯೋಜನೆಯಲ್ಲಿ ಅಧಿಸೂಚನೆ ಹೊರಡಿಸಿದೆ.

ಮೋದಿ ಸರಕಾರ ವಿವಿಧ ಸಚಿವಾಲಯಗಳಲ್ಲಿ 10 ಜಂಟಿ ಕಾರ್ಯದರ್ಶಿಗಳ ಹುದ್ದೆಗಳಿಗೆ ‘ಪಾರ್ಶ್ವ ಪ್ರವೇಶ’ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಿದೆ.

ಕಂದಾಯ, ಹಣಕಾಸು ಸೇವೆಗಳು, ಆರ್ಥಿಕ ವ್ಯವಹಾರಗಳು, ಕೃಷಿ, ರಸ್ತೆ ಸಾರಿಗೆ, ಶಿಪ್ಪಿಂಗ್‌, ಪರಿಸರ ಮತ್ತು ಅರಣ್ಯ, ನಾಗರಿಕ ವಿಮಾನಯಾನ ಮತ್ತು ವಾಣಿಜ್ಯ ಇಲಾಖೆಗಳಿಗೆ ಈ ನೇಮಕಾತಿ ಮಾಡಲಾಗುತ್ತಿದ್ದು, ಸರಕಾರ ಈಗಾಗಲೇ ಈ ಸಂಬಂಧ ಜಾಹೀರಾತುಗಳನ್ನು ಬಿಡುಗಡೆ ಮಾಡಿದೆ.

ಅಧಿಸೂಚನೆಯಂತೆ ಜುಲೈ 1ಕ್ಕೆ ಅನ್ವಯವಾಗುವಂತೆ 40 ವರ್ಷದ ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಉನ್ನತ ಶಿಕ್ಷಣವನ್ನು ಪರಿಗಣಿಸಲಾಗುವುದು. ಆಯ್ಕೆಯಾಗುವವರನ್ನು 3 ವರ್ಷಗಳ ಕಾಟ್ರ್ಯಾಕ್ಟ್‌ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಅಥವಾ 5 ವರ್ಷಗಳವರೆಗೆ ವಿಸ್ತರಿಸಬಹುದು.

ಇದೇ ವೇಳೆ  ಆಯ್ಕೆಯಾದವರಿಗೆ ತಿಂಗಳಿಗೆ 1.44 ಲಕ್ಷ ರೂ.ಗಳಿಂದ 2.18 ಲಕ್ಷ ವೇತನ ನೀಡಲಾಗುತ್ತದೆ. ಇದಲ್ಲದೆ ಕೇಂದ್ರ ಸರ್ಕಾರದ ನೌಕರರಿಗೆ ಸಮಾನವಾಗಿ ಇತರೆ ವೆಚ್ಚಗಳು ಮತ್ತು ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions