ಸುಭಾಷಿತ :

Monday, September 23 , 2019 3:56 PM

ವಾಹನಸವಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಮಾರ್ಗ ಬದಲಿಸಿದರೇ ಗೂಗಲ್ ಮ್ಯಾಪ್ ಕೊಡಲಿದೆ ಅಲರ್ಟ್ ಮೆಸೇಜ್


Wednesday, June 12th, 2019 11:37 am


ಸ್ಪೆಷಲ್ ಡೆಸ್ಕ್ : ಗೂಗಲ್ ಮ್ಯಾಪ್ ಇಲ್ಲದೇ ಇಂದಿನ ಅನೇಕ ವಾಹನ ಸವಾರರು ಪ್ರವಾಸ, ಟ್ಯಾಕ್ಸಿ ಚಾಲಕರಿಗೆ ರೂಟ್, ಪ್ರವಾಸಿಗರಿಗೆ ದಾರಿ ಸೇರಿದಂತೆ ವಿವಿಧ ಮಾಹಿತಿ ಲಭ್ಯವಾಗುವುದೇ ಇಲ್ಲ. ಅಷ್ಟೇ ಅಲ್ಲದೇ ಗೂಗಲ್ ಮ್ಯಾಪ್ ಮಾರ್ಗ ತೋರಿಸುವ ದಾರಿ ದೀಪವಾಗಿ ವಾಹನ ಸವಾರರಿಗೆ ಕೆಲಸ ಮಾಡುತ್ತಿದೆ. ಇಂತಹ ಗೂಗಲ್ ಮ್ಯಾಪ್ ಇನ್ಮುಂದೆ ನೀವು ದಾರಿ ತಪ್ಪಿ ಹೋದ್ರೇ, ನಿಮ್ಮನ್ನು ಎಚ್ಚರಿಸಲಿದೆ. ಈ ಮೂಲಕ ಸರಿ ದಾರಿಯಲ್ಲಿ ಸಾಗುವಂತೆ ಸೂಚಿಸಲಿದೆ.

ಹೌದು… ಕಾಲ ಬದಲಾದಂತೆ, ತಂತ್ರಜ್ಞಾನ ಕ್ರಾಂತಿಯಲ್ಲಿ ಹೊಸ ಹೊಸ ವಿನೂತನ ಫ್ಯೂಚರ್ ಕೂಡ ಬದಲಾವಣೆಗೊಳ್ಳುತ್ತಾ ಸಾಗುತ್ತವೆ. ಇದೇ ಮಾದರಿಯಲ್ಲಿ ವಾಹನ ಸವಾರರನ್ನು ದೃಷ್ಠಿಯಲ್ಲಿಟ್ಟುಕೊಂಡು ಪರಿಚಯವಾದ ಗೂಗಲ್ ಮ್ಯಾಪ್, ಇಂದು ವಿಶ್ವದ ಎಲ್ಲೆಡೇ ಬಳಕೆಯಾಗುತ್ತಿದೆ. ಜೊತೆಗೆ ಕಾಲ ಬದಲಾದಂತೆ ಗೂಗಲ್ ಮ್ಯಾಪ್ ಕೂಡ ವಿನೂತನ ರೀತಿಯಲ್ಲಿ ಬದಲಾವಣೆ ಕಾಣುತ್ತಿದೆ. ಇದರಲ್ಲಿ ಇದೀಗ ವಿನೂತನ ಫೀಚರ್ ಆದ ಮಾರ್ಗ ಬದಲಿಸಿದರು, ಅಲರ್ಟ್ ನೀಡುವ ಮ್ಯಾಪ್ ಕೂಡ ಒಂದಾಗಿದೆ.

ವಾಹನಸ ಸವಾರರು ಗೂಗಲ್ ಮ್ಯಾಪ್ ಬಳಸಿಕೊಂಡು ತಮ್ಮ ನಿರ್ಧಿಷ್ಟ ಸ್ಥಳವನ್ನು ಆಯ್ಕೆಯಮಾಡಿಕೊಂಡು ಪ್ರಯಾಣಿಸುತ್ತಿರುತ್ತಾರೆ. ಆದರೇ ಕೆಲವೊಮ್ಮೆ ನೀವು ಸಾಗುವ ಮಾರ್ಗಬಿಟ್ಟು ಬೇರೆ ಎಡೆ ಸಾಗಿದಾಗ, ಮರಳಿ ಬರಲು ಹತ್ತಾರು ಕಿಲೋಮೀಟರ್ ಮುಂದೆ ಸಾಗಿದಾಗ ಕಷ್ಟವಾಗಿ ಬಿಡುತ್ತದೆ. ಜೊತೆಗೆ ಇಂಧನವೂ ಪೋಲ್ ಆಗುತ್ತದೆ. ಇಂತಹ ಸಮಸ್ಯೆ ತಡೆಗಟ್ಟಲು ಮುಂದಾಗಿರುವ ಗೂಗಲ್, ಇದೀಗ ವಿನೂತನ ರೀತಿಯಲ್ಲಿ ಮಾರ್ಗ ಬದಲಿಸಿದರೇ ಸಾಕು, ನಿಮಗೆ ಅಲರ್ಟ್ ಮಸೇಜ್ ನೀಡುವ ವಿಧಾನವನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರ ಸ್ನೇಹಿಯನ್ನಾಗಿ ಮಾಡಿದೆ.

ಅಂದಹಾಗೇ ಗೂಗಲ್ ಮ್ಯಾಪ್ ಬಳಸಿ ಪ್ರಯಾಣಿಸುವ ಸಂದರ್ಭದಲ್ಲಿ ಬಳಕೆದಾರರು/ವಾಹನ ಸವಾರರು ನಿರ್ಧಿಷ್ಟ ಮಾರ್ಗವನ್ನು ಬಿಟ್ಟು 500 ಮೀಟರ್ ಗಿಂತ ಹೆಚ್ಚು ದೂರ ಓಡಿಸಿದಾಗ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಮ್ಯಾಪ್ ತಾನಾಗಿಯೇ ರವಾನಿಸಲಿದೆ.

ಇದೀಗ ಇಂತ ಆಫ್-ರೂಟ್ ಸೇವೆಯನ್ನು ಭಾರತದಲ್ಲಿ ಪ್ರಾಯೋಗಿಕವಾಗಿ ಗೂಗಲ್ ಸಂಸ್ಥೆ ಪರಿಚಯಿಸುತ್ತಿದ್ದು, ಇದಕ್ಕಾಗಿ ಗೂಗಲ್ ಮ್ಯಾಪ್ ಬಳಕೆದಾದರು ಮಾಡಬೇಕಾಗಿರುವುದು ಇಷ್ಟೇ, ಗೂಗಲ್ ಮ್ಯಾಪ್ ನಲ್ಲಿನ ಮೆನುವಿನಲ್ಲಿ ಕಾಣುವ ಸ್ಟೇ ಸೇಫರ್ ಎಂಬ ಆಯ್ಕೆಯನ್ನು ಮಾಡಬೇಕು. ಹೀಗೆ ಮಾಡಿಕೊಂಡು ನೀವು ಪ್ರಯಾಣ ಬೆಳೆಸಿದಾಗ, ಒಂದು ವೇಳೆ 500 ಮೀಟರ್ ಗಿಂತ ಅಧಿಕ ದೂರ ತಪ್ಪು ದಾರಿಯಲ್ಲಿ ಸಾಗಿದರೇ ಕೂಡಲೇ ನಿಮ್ಮನ್ನು ಗೂಗಲ್ ಮ್ಯಾಪ್ ಎಚ್ಚರಿಕೆಯ ಸಂದೇಶದ ಮೂಲಕ ಎಚ್ಚರಿಸಲಿದೆ ಎಂದು ಎಕ್ಸ್ ಡಿಎ ಡೆವೆಲಪರ್ಸ್ ಎಂಬ ಮೊಬೈಲ್ ಸಾಫ್ಟ್ ವೇರ್ ಅಭಿವೃದ್ಧಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ಅಂದಹಾಗೇ ಈ ವಿಧಾನದ ಪರಿಚಯಕ್ಕೆ ಕಾರಣ, ಬಳಕೆದಾರರು ನಗರವೊಂದರ ಅಪರಿಚಿತ ಸ್ಥಳಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ, ಕ್ಯಾಬ್ ಚಾಲಕ ಮಾರ್ಗ ಬದಲಿಸಿ ಮಾಡಬಹುದಾದ ವಂಚನೆ ತಡೆಯೋದೇ ಮುಖ್ಯ ಉದ್ದೇಶ. ಇದಕ್ಕಾಗಿ ದೇಶದ 10 ಮಹಾನಗರದಗಳಲ್ಲಿ ಇಂತಹ ಸೇವೆಯನ್ನು ಆರಂಭಿಸಿರುವುದಾಗಿಯೂ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ ಬಳಕೆದಾರರ ಸ್ನೇಹಿಯಾಗಿ, ಪ್ರಯಾಣಿಕರ ಸಂಗಾತಿಯಾಗಿ, ಕ್ಯಾಬ್ ಚಾಲಕ ಮಾರ್ಗದರ್ಶಿಯಾಗಿ ಮತ್ತಷ್ಟು ಗೂಗಲ್ ಮ್ಯಾಪ್ ಸ್ನೇಹಿತನಾಗುವ ರೀತಿಯಲ್ಲಿ ಅಭಿವೃದ್ಧಿ ಹೊಂದಲಾಗಿದೆ. ಈ ಮೂಲಕ ಭಾರತದಲ್ಲಿ ಗೂಗಲ್ ಮ್ಯಾಪ್ ನ ಮಾರ್ಗ ಬದಲಿಸಿದರೇ ಅಲರ್ಟ್ ಮನೇಜ್ ಸಂದೇಶ ನೀಡುವ ವಿನೂತನ ವಿಧಾನ ಪರಿಚಯಗೊಳಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions