ಮೈಸೂರು ದಸರಾ : ರಂಗೋಲಿ ಸಂಭ್ರಮದಲ್ಲಿ ಮಿಂದೆದ್ದ ಸಚಿವೆ ಜಯಮಾಲ


Friday, October 12th, 2018 4:23 pm


ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ವಿಶ್ವ ವಿಖ್ಯಾತ ದಸರಾ ಸಂಭ್ರಮ ಗರಿಗೆದರಿದರಿದ್ದು, ಮಹಿಳೆಯರಿಗಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಗೆ ಸಚಿವೆ ಜಯಮಾಲ ಚಾಲನೆ ನೀಡಿದರು.

ಅರಮನೆ ಆವರಣದಲ್ಲಿ ನಡೆಯುತ್ತಿರುವ ಎರಡನೇ ದಿನದ ದಸರಾ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಸ್ಪರ್ಧೆಗೆ ಸುಮಾರು 80 ಮಂದಿಯ ಹೆಸರು ನೋಂದಣಿಯಾಗಿದ್ದು, ಜಿಲ್ಲೆಯ ವಿವಿಧ ಭಾಗಗಳ ಮಹಿಳೆಯರು ಭಾಗವಹಿಸಿದ್ದಾರೆ.

ರಂಗೋಲಿ ನಮ್ಮ ಸಾಂಸ್ಕೃತಿಕ ಪರಂಪರೆಯ ಬಹುದೊಡ್ಡ ಕಲೆ ಎಂದು ಸಚಿವೆ ಜಯಮಾಲ ಬಣ್ಣಿಸಿದರು. ರಂಗೋಲಿ ಮಧ್ಯದಲ್ಲಿ ದೇವರು ಬಂದು ಕೂರುತ್ತಾರೆ ಎಂಬ ನಂಬಿಕೆ ಇದೆ. ರಂಗೋಲಿಗೆ ಕೆಟ್ಟ ಶಕ್ತಿಗಳನ್ನು ದೂರ ಮಾಡುವ ಶಕ್ತಿ ಇದೆ. ಆದ್ದರಿಂದ ಮನೆ ಮುಂದೆ ರಂಗೋಲಿ ಬಿಡಿಸುವ ಸಂಪ್ರದಾಯ ‌ನಡೆದುಕೊಂಡು ಬಂದಿದೆ. ಈ ಬಾರಿ ದಸರಾದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿರುವುದು ಖುಷಿ‌ ನೀಡಿದೆ. ನಾನು ಕೂಡಾ ಮನೆಯಲ್ಲಿ ರಥಸಪ್ತಮಿ, ದೀಪಾವಳಿ ಸಂದರ್ಭದಲ್ಲಿ ರಂಗೋಲಿ ಬಿಡುಸುತ್ತೇನೆ ಎಂದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions