ಖ್ಯಾತ ಹಾಸ್ಯನಟನಿಗೆ ಆಕೆಯ ಎಂಬ ಆತನಿಂದ ಸೆಕ್ಸ್ ದೋಖಾ!


Thursday, October 4th, 2018 3:21 pm


ಮಂಗಳೂರು: ತುಳು ಚಲನಚಿತ್ರ ರಂಗದ ಹಾಸ್ಯನಟರೊಬ್ಬರಿಗೆ ಯುವತಿ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತರನ್ನು ಬೆಂಗಳೂರಿನ ಯಶವಂತಪುರ ನಿವಾಸಿ ಆದಿತ್ಯ ಮತ್ತು ರಾಮನಗರ ಜಿಲ್ಲೆಯ ಕನಕಪುರ ನಿವಾಸಿ ಅರುಣ್ ಎಚ್.ಎಸ್‍ ಅಂತ ತಿಳಿದು ಬಂಧಿದೆ.

ತನ್ನ ಅರೆನಗ್ನ ಫೋಟೋವನ್ನು ಯುವತಿ ಅಶ್ವಿನಿ ಅಲಿಯಾಸ್ ಆರಾಧ್ಯಗೆ ಸೆಂಡ್ ಮಾಡಿದ್ದರು. ಈ ಫೋಟೋ ಪಡೆದ ಯುವಕ ಆರಾಧ್ಯ, ಚಿತ್ರನಟನನ್ನು ಬ್ಲಾಕ್ ಮೇಲ್ ಮಾಡಿದ್ದು ಬಳಿಕಸ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿಕೊಂಡು 65 ಸಾವಿರ ರೂ. ವಸೂಲಿ ಮಾಡಿದ್ದಾನೆ.

ಇದೇ ವೇಳೆ ಇನ್ನಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಾಗ ವ್ಯಕ್ತಿ ಪೊಲೀಸ್ ದೂರು ನೀಡಿದ್ದರು. ತನಿಖಾ ಹಂತದಲ್ಲಿ ಕಮಿಷನರ್ ಹೆಸರಲ್ಲಿ ಮತ್ತು ಗೃಹಮಂತ್ರಿ ಪಿಎ ಹೆಸರಿನಲ್ಲೂ ಫೋನ್ ಕರೆ ಮಾಡಿ ಆರೋಪಿಗಳು ವ್ಯಕ್ತಿಯನ್ನು ಬೆದರಿಸಿದ್ದಾರೆ ಎನ್ನಲಾಗಿದ.

ಕಾರ್ಯಾಚರಣೆ ನಡೆಸಿದ ಮಂಗಳೂರಿನ ಉರ್ವ ಠಾಣೆ ಪೊಲೀಸ್ ಅಧಿಕಾರಿಯಾದ ರವೀಶ್ ನಾಯ್ಕ್ ನೇತೃತ್ವದ ತಂಡ, ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಆದಿತ್ಯ 19ರ ಹರೆಯದ ಪಿಯುಸಿ ವಿದ್ಯಾರ್ಥಿ ಆಗಿದ್ದು ಅಶ್ವಿನಿ ಅಲಿಯಾಸ್ ಆರಾಧ್ಯ ಹೆಸರಿನಲ್ಲಿ ಹಲವರನ್ನು ಬ್ಲಾಕ್ ಮೇಲ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions