ಬ್ರ್ಯಾಂಡೆಡ್ ಅಲ್ಲ ಲೋಕಲ್ ಗಿರ್ ಗಿಟ್ಲೆ!


Wednesday, March 13th, 2019 6:31 pm


ಸಿನಿಮಾಡೆಸ್ಕ್: ಇದೇ ಮಾರ್ಚ್ 15ರಂದು ತೆರೆ ಕಾಣಲಿರುವ ಗಿರ್ ಗಿಟ್ಲೆ ಚಿತ್ರಕ್ಕೆ ಬ್ರ್ಯಾಂಡೆಡ್ ಅಲ್ಲ, ಲೋಕಲ್ ಎಂಬ ಅಡಿಬರಹವಿದೆ. ಇದುವೇ ಇಡೀ ಸಿನಿಮಾದ ಪ್ರಧಾನ ಆಕರ್ಷಣೆಯೂ ಹೌದು. ನಿರ್ದೇಶಕ ರವಿ ಕಿರಣ್ ಮೂವರು ಡಿಫರೆಂಟ್ ಲುಕ್ಕಿನ ಹುಡುಗರ ಮೂಲಕ ಪಕ್ಕಾ ಲೋಕಲ್ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಇಂಥಾ ಲೋಕಲ್ ಹುಡುಗರ ಕಥೆಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದಿವೆ. ಆದರೆ ಗಿರ್ ಗಿಟ್ಲೆ ಅದೆಲ್ಲಕ್ಕಿಂತಲೂ ಭಿನ್ನ. ಈಗ ಪ್ರೇಕ್ಷಕರು ಅಂದುಕೊಂಡಿರೋದಕ್ಕಿಂತಲೂ ಮಜವಾದ ಅಂಶಗಳನ್ನ ಹೊಂದಿರೋ ಈ ಚಿತ್ರ ಮಾರ್ಚ್ 15ರಂದು ತೆರೆ ಕಾಣಲಿದೆ.

ಚಿತ್ರದಲ್ಲಿ ಪ್ರದೀಪ್, ಚಂದ್ರು, ಗುರು ಎಂಬ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಹಾಗೂ ಅದ್ವಿತಿ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾವನ್ನು ಉಪೇಂದ್ರ ಅವರ ಗರಡಿಯಲ್ಲಿ ಪಳಗಿರುವ ರವಿಕಿರಣ್ ಕಥೆ-ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ವೀರಾಂಜನೇಯ ಪ್ರೊಡಕ್ಷನ್ ಬ್ಯಾನರ್ ಅಡಿ ಗಿರೀಶ್, ತಿಮ್ಮರಾಜು ಹಾಗೂ ವೆಂಕಟೇಶ್ ಎಂಬುವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಪೆಟ್ರೋಲ್ ಪ್ರಸನ್ನ, ಕೋಟೆ ಪ್ರಭಾಕರ್​​, ಓಂ ಪ್ರಕಾಶ್ ರಾವ್​​​, ಮಿತ್ರ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions