ಸುಭಾಷಿತ :

Monday, September 23 , 2019 3:51 PM

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮಿಕ್ ಸಿನಿಮಾದ ಟ್ರೇಲರ್‌ ರಿಲೀಸ್‌ ಇಲ್ಲಿದೆ ನೋಡಿ


Sunday, May 19th, 2019 2:18 pm

ಬೆಂಗಳೂರು: ‘ಗೋಲ್ಡನ್ ಸ್ಟಾರ್’ ಗಣೇಶ್ ಇದೇ ಮೊದಲ ಬಾರಿಗೆ ‘ಗಿಮಿಕ್’ ಸಿನಿಮಾ ಮೂಲಕ ಹಾರರ್ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂಬ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈಗ ಹೊಸ ವಿಷ್ಯ ಏನಪ್ಪ ಅಂದ್ರೆ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಬಿಡುಗಡೆಯಾದ ಕೆಲವೇ ನಿಮಿಷಯದಲ್ಲಿ ಯ್ಯೂಟ್ಯೂಬ್‌ನಲ್ಲಿ ಹೊಸ ಟ್ರೆಂಡ್‌ ಸೃಷ್ಟಿ ಮಾಡಿದೆ. ಈವರೆಗೂ ರೊಮ್ಯಾಂಟಿಕ್-ಕಾಮಿಡಿ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಗಣೇಶ್, ಈಗ ಮೊದಲ ಬಾರಿಗೆ ಹಾರರ್-ಕಾಮಿಡಿ ಶೈಲಿಯ ‘ಗಿಮಿಕ್’ನಲ್ಲಿ ನಟಿಸುತ್ತಿರುವುದರಿಂದ ಸಹಜವಾಗಿಯೇ ಚಿತ್ರದ ಮೇಲೆ ನಿರೀಕ್ಷೆ ಜಾಸ್ತಿಯಿದೆ.

ನಾಗಣ್ಣ ನಿರ್ದೇಶನದಲ್ಲಿ ಸಿದ್ಧಗೊಂಡಿದ್ದು. ಸಿನಿಮಾಕ್ಕೆ ಅರ್ಜುನ್ ಜನ್ಯ ಜನ್ಯ ಸಂಗೀತ ನೀಡುತ್ತಿದ್ದು,ರವಿವರ್ಮ ಸಾಹಸ ನಿರ್ದೇಶನವಿರಲಿದೆ. ದೀಪಕ್ ಸಮಿ ಬಂಡವಾಳ ಹೂಡುತ್ತಿರುವ ಈ ಚಿತ್ರದಲ್ಲಿ, ಸಾಧು ಕೋಕಿಲ, ಶೋಭರಾಜ್, ಸುಂದರ್ ರಾಜ್ ಸೇರಿ ಅನೇಕರು ಬಣ್ಣ ಹಚ್ಚುತ್ತಿದ್ದಾರೆ. ಹಾರರ್ ಕಾಮಿಡಿ ಕಥಾಹಂದರವಿರುವ ಈ ಚಿತ್ರ ಇನ್ನೇನು ಕೆಲವೇ ದಿವಸದಲ್ಲಿ ನಿಮ್ಮ ಮುಂದೆ ಮೂಡಿ ಬರಲಿದೆ. ಆನಂದ್‌ ಆಡಿಯೋದಲ್ಲಿ ಲಾಂಚ್‌ ಆಗಿರುವ ಸಿನಿಮಾದ ಟ್ರೇಲರ್‌‌ ಇಲ್ಲಿದೆ ನೋಡಿ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions