ಸುಭಾಷಿತ :

Friday, November 22 , 2019 6:50 AM

‘ಗಂಟುಮೂಟೆ’ : ರೂಪಾ ರಾವ್ ಸೃಷ್ಟಿಸಿದ ವಿಭಿನ್ನ ಪ್ರೇಮಕಾವ್ಯ!- ರೇಟಿಂಗ್ 4/5


Friday, October 18th, 2019 7:29 pm

ಸಿನಿಮಾ ಡೆಸ್ಕ್ : ಹೊಸ ತಂಡವೊಂದು ರೂಪಿಸಿದ ಸಿನಿಮಾ ಬಂತೆಂದರೆ ಕನ್ನಡದ ಪ್ರೇಕ್ಷಕರು ಸ್ಟಾರ್ ಸಿನಿಮಾಗಳ ಅಬ್ಬರದ ನಡುವೆಯೂ ಅದನ್ನು ನೋಡುತ್ತಾರೆ. ಸರಿಯಾದ ಹೂರಣವಿದ್ದರೆ ಖಂಡಿತವಾಗಿಯೂ ಗೆಲ್ಲಿಸುತ್ತಾರೆ. ರೂಪಾ ರಾವ್ ನಿರ್ದೇಸನದಲ್ಲಿ ಮೂಡಿ ಬಂದಿದ್ದ ಗಂಟುಮೂಟೆ ಚಿತ್ರ ಕೂಡಾ ಆರಂಭಿಕವಾಗಿ ಅಂಥಾದ್ದೇ ಹೊಸತನದೊಂದಿಗೆ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಟ್ರೇಲರ್ ಮೂಲಕವಂತೂ ಈ ಚಿತ್ರ ಪ್ರೇಕ್ಷಕರನ್ನು ಕಾಡಿದ ಪರಿ ಚೇತೋಹಾರಿಯಾದದ್ದು. ಈ ಚಿತ್ರವೀಗ ತೆರೆಕಂಡಿದೆ. ನೋಡುಗರೆಲ್ಲ ಅತ್ಯಂತ ಅಪರೂಪದ ಚಿತ್ರವನ್ನು ಕಣ್ತುಂಬಿಕೊಂಡ ಖುಷಿಯಲ್ಲಿ ಮಿಂದೇಳುತ್ತಿದ್ದಾರೆ.

ಈ ಚಿತ್ರದ ಮೂಲಕವೇ ರೂಪಾ ರಾವ್ ನಿರ್ದೇಶಕಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಷ್ಟಕ್ಕೂ ಇವರೇನು ಅಪರಿಚಿತರಲ್ಲ. ಈಗಾಗಲೇ ಒಂದಷ್ಟು ಕಿರು ಚಿತ್ರಗಳು ಮತ್ತು ವೆಬ್ ಸೀರೀಸ್ ಮೂಲಕ ಹೆಸರು ಮಾಡಿರುವವರು. ಕೇವಲ ಕನ್ನಡ ಮಾತ್ರವಲ್ಲದೇ ಇತರೇ ಭಾಷೆಗಳಲ್ಲಿಯೂ ಆ ವೆಬ್ ಸೀರೀಸ್ ಹೆಸರುವಾಸಿಯಾಗಿತ್ತು. ಅದರಲ್ಲಿಯೂ ಕೂಡಾ ರೂಪಾ ರಾವ್ ಹದಿಹರೆಯದ ಹೆಣ್ಣೊಬ್ಬಳ ಒಡಲ ಮರ್ಮರವನ್ನು ಧ್ವನಿಸುವಂಥಾ ರೀತಿಯಲ್ಲಿ ದೃಷ್ಯ ಕಟ್ಟಿದ್ದರು. ಗಂಟುಮೂಟೆಯೊಳಗೂ ಸಹ ಅವರು ಅಂಥಾದ್ದೇ ಬೆರಗುಗಳನ್ನಿಟ್ಟಿದ್ದಾರೆ. ಅದನ್ನು ಕಂಡ ಪ್ರತೀ ಪ್ರೇಕ್ಷಕರೂ ಥ್ರಿಲ್ ಆಗಿದ್ದಾರೆ.

ನಾಯಕಿಯ ದೃಷ್ಟಿಯಲ್ಲಿಯೇ ಕಥೆ ಕದಲುವುದು ಈ ಚಿತ್ರದ ಪ್ರಧಾನ ಅಂಶ. ಮೀರಾ ಎಂಬ ಬೆಂಗಳೂರಿನ ಮಧ್ಯಮವರ್ಗದ ಹೆಣ್ಣುಮಗಳ ಸುತ್ತ ನಡೆಯೋ ಕಥೆ ಇಲ್ಲಿದೆ. ಮೀರಾ ಮೃದುಸ್ವಭಾವದ ಹೆಣ್ಣುಮಗಳು. ಆದರೆ ಸಿನಿಮಾ ಬಗ್ಗೆ ತುಸು ಹೆಚ್ಚೇ ಕ್ರೇಜ್. ಸಲ್ಮಾನ್ ಖಾನ್ ಎಂದರೆ ಜೀವ ಬಿಡೋವಷ್ಟು ಪ್ರೀತಿ. ಇಂಥಾ ಮೀರಾ ಸಲ್ಮಾನ್ ಖಾನ್ ಚಿತ್ರವೊಂದನ್ನು ನೋಡಿ ಅದರ ಪಾತ್ರಗಳಲ್ಲಿ ಕಳೆದು ಹೋಗಿರುತ್ತಾಳೆ. ತಾನು ಪ್ರೀತಿಸೋ ಹುಡುಗ ಕೂಡಾ ಸಲ್ಮಾನ್ ಖಾನ್‍ನನ್ನೇ ಹೋಲಬೇಕೆಂಬುದು ಆಕೆಯ ಬಯಕೆ. ಕಡೆಗೂ ಹುಡುಕಾಡಿ ತನ್ನದೇ ಕ್ಲಾಸಿನ ಮಧು ಎಂಬಾತನೊಂದಿಗೆ ಪ್ರೇಮ ಸಲ್ಲಾಪ ಶುರುವಿಟ್ಟುಕೊಳ್ಳುತ್ತಾಳೆ.

ಆ ನಂತರ ತೆರೆದುಕೊಳ್ಳೋದು ವಿಭಿನ್ನ ಪ್ರೇಮ ಕಾವ್ಯ. ನಮಗೆ ಪರಿಚಯವಿಲ್ಲದ ಮನೋಲೋಕವೊಂದನ್ನು ರೂಪಾ ರಾವ್ ಸೃಷ್ಟಿಸಿದ್ದಾರೆ. ಜೇಜು ಬೆಳವಾಗಿ ಮೀರಾ ಎಂಬ ಮುಖ್ಯ ಪಾತ್ರವನ್ನು ನುಂಗಿಕೊಂಡು ನಟಿಸಿದ್ದಾರೆ. ಇತರೇ ಪಾತ್ರವರ್ಗವೂ ಅದೇ ರೀತಿ ಸಾಥ್ ಕೊಟ್ಟಿದೆ. ರೂಪಾ ರಾವ್ ಸ್ಕ್ರೀನ್ ಪ್ಲೇನಲ್ಲಿಯಣಂತೂ ನಿಜವಾದ ಮ್ಯಾಜಿಕ್ ಮಾಡಿದ್ದಾರೆ. ಈ ಮೂಲಕವೇ ನಿರ್ದೇಶಕಿಯಾಗಿ ನೆಲೆ ನಿಲ್ಲುವ ಸೂಚನೆಯನ್ನೂ ರವಾನಿಸಿದ್ದಾರೆ. ಅಪರೂಪದ ಅನುಭವಕ್ಕಾಗಿ ಈ ಚಿತ್ರವನ್ನೊಮ್ಮೆ ನೀವೆಲ್ಲರೂ ನೋಡಿ ಆನಂದಿಸಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions