ಸುಭಾಷಿತ :

Monday, September 23 , 2019 3:57 PM

ಹುಡುಗಿಯರು ತಮ್ಮ ದೇಹದ ಆಕಾರದ ಪ್ರಕಾರ ಯಾವ ಆಹಾರ ಸೆಲೆಕ್ಟ್ ಮಾಡಬೇಕು ಗೊತ್ತೇ..?


Monday, May 20th, 2019 7:35 pm

ಸ್ಪೆಷಲ್‌ಡೆಸ್ಕ್:  ಎಲ್ಲರಿಗಿಂತಲೂ ಚೆನ್ನಾಗಿ ಕಾಣಬೇಕೆಂಬ ಆಸೆ ಹೆಣ್ಮಕ್ಕಳಲ್ಲಿ ಹೆಚ್ಚಾಗಿ ಇರುತ್ತದೆ. ಅದಕ್ಕೆ ಖರ್ಚು ಕೂಡಾ ಹೆಚ್ಚಾಗಿ ಮಾಡುತ್ತಾರೆ. ಬರೀ ಜಿಮ್ ಗೆ ಹೋಗಿ ಬೆವರು ಸುರಿಸಿ ದೇಹವನ್ನು ಸುಂದರವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರಲ್ಲಿ ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ದೇಹದ ಆಕಾರವಿರುತ್ತದೆ. ಕೆಲವರಿಗೆ ಸೊಂಟ, ಹೊಟ್ಟೆ ಭಾಗದಲ್ಲಿ ಕೊಬ್ಬು ಹೆಚ್ಚಾಗಿ ಇದ್ದರೆ,ಇನ್ನು ಕೆವರಿಗೆ ಕೈ ತೋಳು ಹುಬ್ಬಿದಂತೆ ದಪ್ಪವಾಗಿ ಕಾಣುತ್ತದೆ. ಇನ್ನು ಕೆಲವರಿಗೆ ತೊಡೆಯ ಭಾಗದಲ್ಲಿ ಕೊಬ್ಬು ಹೆಚ್ಚಾಗಿರುತ್ತದೆ. ನಿಮ್ಮ ದೇಹದ ಆಕಾರದ ಅನುಸಾರವಾಗಿ ನೀವು ಯಾವ ರೀತಿ ಆಹಾರವನ್ನು ಸೇವಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಡಿಟೇಲ್ಸ್.

ತಳ್ಳನೆಯ ಸಪಟಾದ ದೇಹಾಕಾರ:

ಇಂತಹ ದೇಹದ ಆಕಾರ ಉಳ್ಳವರು ಎಷ್ಟೇ ಆಹಾರ ಸೇವಿಸಿದ್ರು ತೂಕ ಹೆಚ್ಚಾಗುವುದಿಲ್ಲ. ಹಾಗಂತ ಸ್ವೀಸ್, ಚಾಟ್ಸ್, ಫಾಸ್ಟ್ ಫುಡ್ ಸೇವಿಸಬೇಡಿ. ಅದಕ್ಕಿಂತ ಮೀನು,ಬಾಳೆಹಣ್ಣು, ಬಾದಾಮಿ ಮತ್ತು ಬೆಣ್ಣೆ ಹಣ್ಣನ್ನು ತಿನ್ನಿ. ಹೆಚ್ಚಾಗಿ ಒಳ್ಳೆಯ ಕೊಬ್ಬಿನಾಂಶವಿರುವ ಆಹಾರ ತುಂಬಾನೇ ಒಳ್ಳೆಯದು.

ಸೊಂಟದ ಭಾಗ ಹೆಚ್ಚಿದ್ದು ಮೊಟ್ಟೆಯ ದೇಹಾಕಾರ:

ಇಂತಹ ದೇಹದ ಆಕಾರ ಉಳ್ಳವರು ಹೆಚ್ಚಾಗಿ ಕೊಬ್ಬಿನಾಂಶವಿರುವ ಆಹಾರದಿಂದ ದೂರವಿದ್ದಷ್ಟು ಒಳ್ಳೆಯದು. ಒಂದೇ ಸಲ ಹೆಚ್ಚಾಗಿ ತಿನ್ನಬೇಡಿ. ದಿನಕ್ಕೆ 5 ರಿಂದ 6 ಸಲ ಲೈಟಾಗಿ ಊಟ ತಿನ್ನಿ. ಮಾಂಸ ಹಾರದಿಂದ ದೂರ ಉಳಿದರೂ ಇನ್ನೂ ಒಳ್ಳೆಯದು. ವಿಟಮಿನ್ ಸಿ.ಇ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಿ. ಹಸಿ ತರಕಾರಿ ಮತ್ತು ಗ್ರೀನ್ ಟೀ ಕುಡಿದ್ರೆ ಒಳ್ಳೆಯದು. ಗ್ಯಾಸ್ಟ್ರಿಕ್ ಆಗದಂತೆ ನೋಡಿಕೊಳ್ಳಿ ಇಂತಹ ದೇಹಾಕಾರ ಉಳ್ಳವರಿಗೆ ಗ್ಯಾಸ್ಟ್ರೀಕ್ ಸಮಸ್ಯೆ ಇದ್ದರೆ ಹೊಟ್ಟೆ ಉಬ್ಬಿದಂತೆ ಕಾಣಿಸುತ್ತದೆ. ಇದರಿಂದ ಆದಷ್ಟು ಗ್ಯಾಸ್ಟ್ರೀಕ್ ಆಗದಂತೆ ನೋಡಿಕೊಳ್ಳಿ.

ತೊಡೆ ಭಾಗ ಹೆಚ್ಚಿದ್ದು ಮೇಲ್ಭಾಗ ಸಪಟಾಗಿರುವ ದೇಹಾಕಾರ:

ಹೆಚ್ಚಾಗಿ ಈ ಆಕಾರವನ್ನೇ ಹುಡುಗಿಯರು ಇಷ್ಟಪಡುತ್ತಾರೆ. ಈ ಆಕಾರದೋರ್ಗೆ ಯಾವ ಡ್ರಸ್ ಹಾಕುದ್ರು ಲುಕ್ ಆಗಿ ಕಾಣ್ತಾರೆ. ಆದರೆ ಕೂತಲ್ಲೇ ಕೂತು ಬೇಕಾಗಿದ್ದನ್ನೆಲ್ಲಾ ತಿಂದರೆ ತೊಡೆ ಭಾಗ ದಪ್ಪವಾಗುತ್ತಲೇ ಹೋಗುತ್ತದೆ. ಆದ್ದರಿಂದ ಹೆಚ್ಚಾಗಿ ಕೆಲ್ಸ ಮಾಡಿ. ಮತ್ತು ತುಂಬಾನೆ ಓಡ್ಬೇಕು ಇಲ್ಲದಿದ್ರೆ ಸಕ್ಕರೆ ಖಾಯಿಲೆ ಬರುವ ಸಾಧ್ಯತೆಗಳಿರುತ್ತದೆ. ನೂಡಲ್ಸ್, ಗೋಬಿ ಐಸ್ ಕ್ರೀಂ ಸೇವನೆಯಿಂದ ದೂರ ಉಳಿಯುವುದು ಒಳ್ಳೆಯದು. ಹೆಚ್ಚಾಗಿ ನೀರು ಕುಡಿಯಬೇಕು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions