ಪೂಜೆ ವೇಳೆ ಗಂಟೆ ಬಾರಿಸಲು ಇದುವೇ ಕಾರಣ..! ನಿಮಗೆ ಗೊತ್ತಿಲ್ವಾ ? ನೋಡಿ


Sunday, June 24th, 2018 2:18 pm


ಸ್ಪೆಷಲ್ ಡೆಸ್ಕ್: ನಾವು ದೇವಸ್ಥಾನಕ್ಕೆ ಪ್ರವೇಶ ಮಾಡಿದ ನಂತರ ನೇರವಾಗಿ ಮೂಲ ವಿಗ್ರಹವನ್ನು ದರ್ಶನ ಮಾಡುವುದು ಒಳ್ಳೆಯದಲ್ಲ. ದೇವಸ್ಥಾನಗಳು ಕೇವಲ ಭಗವಂತನ ಪೂಜೆ ಮಾಡುವ ಸ್ಥಳಗಳು ಮಾತ್ರವೇ ಅಲ್ಲ. ಶಾಸ್ತ್ರವಾಗಿ, ಸಂಕೇತವಾಗಿ, ಕಟ್ಟಲಾಗಿರುವ ಶಕ್ತಿ ಕೇಂದ್ರಗಳು.

ದೇವಸ್ಥಾನಕ್ಕೆ ಪ್ರವೇಶ ಮಾಡುವ ಮುನ್ನ ನಮ್ಮ ದೇಹವು ಶುದ್ಧಿಯಾಗಿರಬೇಕು. ನಮ್ಮ ಮನಸ್ಸಿನಲ್ಲಿಯೂ ಸಹ ಕಾಮ, ಕ್ರೋದ ಇರಬಾರದು. ದೇವಸ್ಥಾನಕ್ಕೆ ಪ್ರವೇಶ ಮಾಡುವ ತಕ್ಷಣವೇ ಮೊದಲಿಗೆ ಕೈ,ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ತಲೆ ಮೇಲೆ ನೀರನ್ನು ಸಿಂಪಡಿಸಿಕೊಳ್ಳಬೇಕು. ನಂತರ ಗೋಪುರ,ಸಿಂಹ ದ್ವಾರ ಮತ್ತು ಧ್ವಜಸ್ತಂಭಕ್ಕೆ ಬೇಡಿಕೊಳ್ಳಬೇಕು. ದೇವಸ್ಥಾನದ ಘಂಟೆಯನ್ನು ಬಾರಿಸಿ ಪ್ರಧಾನ ದೇವರ ದರ್ಶನ ಪಡೆಯಬೇಕು ಎಂದು ಶಾಸ್ತ್ರಗಳು ಹೇಳುತ್ತದೆ. ಪ್ರತಿ ಹಿಂದೂ ದೇವಸ್ಥಾನದಲ್ಲಿ ಘಂಟೆ ಕಡ್ಡಾಯವಾಗಿ ಇರುತ್ತದೆ.

ಮನೆಯಲ್ಲಿಯೂ ಸಹ ಪೂಜೆ ಮಾಡುವಾಗ ಘಂಟೆಯನ್ನು ಬಾರಿಸುವುದು ಹಿಂದೂ ಸಂಪ್ರದಾಯ. ಪೂಜೆ ಮಾಡುವಾಗ ದೇವಸ್ಥಾನದಲ್ಲಿ ಮತ್ತು ಮನೆಯಲ್ಲಿ ಏಕೆ ಘಂಟೆಯನ್ನು ಬಾರಿಸುತ್ತಾರೆ ಈಗ ನಾವು ತಿಳಿದುಕೊಳ್ಳೋಣ. ಘಂಟೆಯನ್ನು ಬಾರಿಸಿದರೆ ‘ಓಂಕಾರ’ ನಾದ ಕೇಳಿಬರುತ್ತದೆ. ಈ ಘಂಟೆ ನಾದ ಮಾನಸಿಕ ಚಿಂತೆಯನ್ನು ದೂರ ಮಾಡಿ ಮನಸ್ಸು ದೇವರ ಮೇಲೆ ಏಕಾಗ್ರತೆ ಬರುವಂತೆ ಮಾಡುತ್ತದೆ. ಈ ನಾದ ಭಕ್ತರ ಕಿವಿಯಲ್ಲಿ ಪ್ರಣವ ನಾದವಾಗಿ ಕೇಳಿಸುತ್ತದೆ. ದೇವರನ್ನು ವಿಗ್ರಹದ ಒಳಗೆ ಆಹ್ವಾನಿಸಲು ಈ ಘಂಟೆಯನ್ನು ಬಾರಿಸುತ್ತಾರೆ ಎಂದು ಪುರಾಣಗಳು ಹೇಳುತ್ತಿದೆ. ಘಂಟೆಯಲ್ಲಿಯೂ ಸಹ ದೇವರು ಇರುತ್ತಾರೆಂದು ಶಾಸ್ತ್ರಗಳು ಹೇಳುತ್ತಿದೆ.

ಈ ಘಂಟೆಯಲ್ಲಿ ಪ್ರತಿ ಭಾಗಕ್ಕೂ ಒಂದು ಪ್ರಾಮುಖ್ಯತೆ ಇದೆ. ಗಂಟೆಯ ನಾಲಿಗೆಯಲ್ಲಿ ಸರಸ್ವತಿ ದೇವಿ ನೆಲೆಸಿರುತ್ತಾರೆ. ಮಹಾ ರುದ್ರನು ಘಂಟೆಯ ಉದರ ಭಾಗದಲ್ಲಿ ಮತ್ತು ಸೃಷ್ಟಿಕರ್ತ ಬ್ರಹ್ಮ ಇರುತ್ತಾರೆ. ಮುಖ ಭಾಗದಲ್ಲಿ ವಾಸುಕಿ ಇರುತ್ತಾರೆ. ಹಿಡಿ ಭಾಗದಲ್ಲಿ ಪ್ರಾಣಶಕ್ತಿ ಇರುತ್ತಾರೆ. ಆದ್ದರಿಂದ ಘಂಟೆಯನ್ನು ತುಂಬಾ ಪವಿತ್ರವಾಗಿ ಭಾವಿಸಬೇಕು. ಮನೆಯಲ್ಲಿ ಪೂಜೆ ಮಾಡುವಾಗ ಘಂಟೆಯನ್ನು ಹೊಡೆದರೆ ದುಷ್ಟಶಕ್ತಿಗಳು ನಮ್ಮ ಹತ್ತಿರ ಬರುವುದಿಲ್ಲ. ದೇವಸ್ಥಾನದಿಂದ ಹಿಂತಿರುಗಿ ಬರುವಾಗ ಘಂಟೆಯನ್ನು ಹೊಡೆದರೆ ಅಶುಭವೋ ಆಗುತ್ತದೆ. ಘಂಟೆಯನ್ನು ಬಾರಿಸುವಾಗ ಅದರಿಂದ ಬರುವ ಧ್ವನಿ ರಂಗದಿಂದ ಆಧ್ಯಾತ್ಮಿಕ ಭಾವನೆಗಳು ಮತ್ತು ಮಾನಸಿಕ ಪ್ರಶಾಂತತೆ ಸಿಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions