ಸುಭಾಷಿತ :

Tuesday, September 17 , 2019 6:57 AM

-->

ಮೀನು ಅಂದ್ರೆ ಇಷ್ಟ ತಾನೇ? ಲಾಭ ತಿಳಿದ್ರೆ ಮತ್ತಷ್ಟು ಇಷ್ಟ ಆಗುತ್ತೆ ನೋಡಿ…


Tuesday, June 18th, 2019 12:11 pm

ಸ್ಪೆಷಲ್ ಡೆಸ್ಕ್ : ಮೀನು ಮಾಂಸಾಹಾರ ಪ್ರಿಯರ ಅಚ್ಚು ಮೆಚ್ಚಿನ ಆಹಾರವಾಗಿದೆ. ಏನು ಇಲ್ಲಾಂದ್ರೂ ಪ್ರತಿದಿನ ಮೀನು ಬೇಕೇ ಬೇಕು ಅನ್ನೋರೆ ಹೆಚ್ಚು. ತಪ್ಪಲ್ಲ ಬಿಡಿ. ಮೀನಿನಲ್ಲಿರೋ ಅರೋಗ್ಯ ಪ್ರಯೋಜನಗಳು ಸಹ ಹಾಗೆ ಇವೆ. ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್, ಐರನ್, ಸತು, ಮೆಗ್ನಿಶಿಯಂ, ಐಯೋಡಿನ್ ಮತ್ತು ಪೊಟಾಶಿಯಂ ಜೊತೆಗೆ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ.

ಪ್ರತಿದಿನ ಅಥವಾ ನಿಯಮಿತವಾಗಿ ಮೀನು ಸೇವನೆ ಮಾಡಿದರೆ ಅದರಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ನೋಡಿ…

ಒಮೆಗಾ-3 ಕೊಬ್ಬಿನಾಮ್ಲವನ್ನು ಹೊಂದಿರುವಂತಹ ಮೀನಿನ ಸೇವನೆ ಮಾಡಿದರೆ ಅದರಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು.
ಸಾಲ್ಮನ್ ಮತ್ತು ಟ್ಯುನಾ ಮೀನನ್ನು ಅಸ್ತಮಾ ರೋಗಿಗಳು ಸೇವನೆ ಮಾಡಬೇಕು
ನೆನಪಿನ ಶಕ್ತಿ ಚೆನ್ನಾಗಿರಲು, ಅಲ್ಜಾಮೈರ್ ಕಾಯಿಲೆ ಬಾರದಂತೆ ಮೀನು ಕಾಪಾಡುತ್ತದೆ. ಆದುದರಿಂದ ಮೀನನ್ನು ನಿಯಮಿತವಾಗಿ ಸೇವಿಸಿ.
ಮೀನಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ. ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಗೆ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಮೀನಿನಲ್ಲಿ ಇರುವ ಒಮೆಗಾ-3 ಕೊಬ್ಬಿನಾಮ್ಲ ಕಣ್ಣಿನ ದೃಷ್ಟಿ ಸಮಸ್ಯೆ ನಿವಾರಣೆ ಮಾಡಿ ಉತ್ತಮ ದೃಷ್ಟಿ ಹೊಂದಲು ಸಹಾಯ ಮಾಡುತ್ತದೆ.
ರಾತ್ರಿ ಸರಿಯಾಗಿ ನಿದ್ರೆ ಬಾರದೆ ಇದ್ದರೆ, ನಿದ್ರಾ ಹೀನತೆ ಸಮಸ್ಯೆ ಕಾಡಿದರೆ ಮೀನು ತಿನ್ನಿ. ಇದರಲ್ಲಿರುವ ವಿಟಮಿನ್ ಡಿ ಆರಾಮದಾಯಕ ನಿದ್ದೆಗೆ ಸಹಾಯಕವಾಗಿದೆ.
ಸ್ತನ, ಕೊಲೊನ್, ಅನ್ನನಾಳ, ಅಂಡಾಶಯ ಮತ್ತು ಪ್ರಾಸ್ಟೇಟ್ ಮೊದಲಾದ ಕ್ಯಾನ್ಸರ್ ಗಳನ್ನು ಮೀನು ಸೇವನೆಯಿಂದ ನಿಯಂತ್ರಿಸಬಹುದು.
ಸಂಧಿವಾತ ಸಮಸ್ಯೆ ಇರುವವರು ನಿಯಮಿತವಾಗಿ ಮೀನನ್ನು ಆಹಾರದಲ್ಲಿ ಬಳಕೆ ಮಾಡಿ.
ಮೀನಿನಲ್ಲಿರುವ ವಿಟಮಿನ್ ಡಿ ಟೈಪ್ ೧ ಮದುಮೇಹ ನಿವಾರಣೆ ಮಾಡಿ, ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಋತುಚಕ್ರದ ಮೊದಲು ಸಮಸ್ಯೆ ಕಾಣಿಸಿಕೊಳ್ಳುವ ಮಹಿಳೆಯರು ನಿಯಮಿತವಾಗಿ ಮೀನಿನ ಸೇವನೆ ಮಾಡಿದರೆ ಸಮಸ್ಯೆ ಕಡಿಮೆಯಾಗುವುದು.
ಮೀನು ಸೇವನೆಯಿಂದ ಅಸ್ತಮಾ ದೂರ ಮಾಡಬಹುದು. ಇದರಲ್ಲೂ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಸ್ತಮಾ ರೋಗಕ್ಕೆ ಇದು ಉತ್ತಮ ಪರಿಹಾರ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions