ಸುಭಾಷಿತ :

Monday, September 23 , 2019 3:56 PM

Updated : ಹೃದಯ ಬೇನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ನಿರ್ದೇಶಕ ಮಣಿರತ್ನಂ ಡಿಸ್ಚಾರ್ಜ್


Monday, June 17th, 2019 4:18 pm

ಚೆನ್ನೈ : ಭಾನುವಾರ ಶೂಟಿಂಗ್ ನಲ್ಲಿ ಭಾಗವಹಿಸಲು ತೆರಳಿದ್ದ ನಿರ್ದೇಶಕ ಮಣಿರತ್ನಂ ಎದೆನೋವಿನಿಂದ ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ಹೆಸರಾಂತ ನಿರ್ದೇಶಕ ಇದೀಗ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿ ಮನೆಗೆ ಮರಳಿದ್ದಾರೆ.

ಕಳೆದ ನಿನ್ನೆ ಶೂಟಿಂಗ್ ಗೆ ತೆರಳಿದ್ದ ವೇಳೆ ಮಣಿರತ್ನಂ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕೂಡಲೇ ಅವರನ್ನು ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಿಸಿ, ಚಿತಿತ್ಸೆಗೆ ಒಳಪಡಿಸಲಾಗಿತ್ತು. ನಂತ್ರ ಚಿಕಿತ್ಸೆ ನೀಡಿ, ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದನ್ನು ಮಣಿರತ್ನಂ ಅವರ ಕಚೇರಿಯೇ ಟ್ವಿಟ್ ಮಾಡುವ ಮೂಲಕ ಸ್ಪಷ್ಟ ಪಡಿಸಿದೆ.

ಅಂದಹಾಗೇ, ನಿರ್ದೇಶಕ ಮಣಿರತ್ನಂಗೆ ಈ ಹಿಂದೆ 2004ರಲ್ಲಿ ಯುವ ಚಿತ್ರದ ಚಿತ್ರೀಕರಣದ ವೇಳೆಯೂ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ತಪಾಸಣೆಗೆ ಒಳಪಡಿಸಿದ್ದ ವೈದ್ಯರು ಹೃದಯ ಸಂಬಂಧಿ ಖಾಯಿಲೆಯ ಇರುವ ಬಗ್ಗೆ ತಿಳಿಸಿಕೊಂಡು, ಚಿಕಿತ್ಸೆ ನೀಡಿದ್ದರು. ಈ ಮೂಲಕ ಹೃದಯ ಸಂಬಂಧಿ ಖಾಯಿಲೆಯಿಂದ ಮಣಿರತ್ನಂ ಬಳಲುತ್ತಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions