ಇಂದು ಫಿಫಾ ವಿಶ್ವಕಪ್ ಪಂದ್ಯಾವಳಿಗೆ ಅಧಿಕೃತ ಚಾಲನೆ : ಕಾಲ್ಚೆಂಡಿನ ಕಾಳಗಕ್ಕೆ ರಷ್ಯಾ ಸಜ್ಜು


Thursday, June 14th, 2018 9:52 am

ಮಾಸ್ಕೋ : ಕೋಟ್ಯಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಫಿಫಾ ವಿಶ್ವಕಪ್ ಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಈ ಮೂಲಕ 30 ದಿನಗಳ ಫುಟ್ಬಾಲ್ ಹಬ್ಬ ವಿಶ್ವದೆಲ್ಲೆಡೆ ನಡೆಯಲಿದೆ.

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಇಂದು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. 30 ದಿನಗಳ ಪಂದ್ಯಾವಳಿಗಾಗಿ ಮಾಸ್ಕೋ, ಸೆಂಟ್ ಪೀಟರ್ಸ್ ಬರ್ಗ್, ಸೋಚಿ ಸೇರಿದಂತೆ ವಿವಿಧ ನಗರಗಳಲ್ಲಿ 12 ಕ್ರೀಡಾಂಗಣಗಳು ನಿರ್ಮಾಣವಾಗಿದ್ದು, ಒಟ್ಟು 64 ಪಂದ್ಯಗಳು ನಡೆಯಲಿವೆ.

2018 ರ ವಿಶ್ವಕಪ್ ನಲ್ಲಿ ಒಟ್ಟು 32 ತಂಡಗಳು ಸೆಣಸಾಟ ನಡೆಸಲಿವೆ. ಅರ್ಜೆಂಟೈನಾ, ಬ್ರೆಜಿಲ್, ಜರ್ಮನಿ, ಸ್ಪೇನ್, ಪೋರ್ಚಗಲ್,ಫ್ರಾನ್ಸ್ ಮತ್ತು ಇಂಗ್ಲೆಂಡ್ ತಂಡಗಳು ಈ ಬಾರಿ ಅತ್ಯಂತ ಪ್ರಬಲ ತಂಡಗಳೆಂದು ಪರಿಗಣಿಸಲಾಗಿದೆ.

ಈ ಬಾರಿ ವಿಶ್ವಕಪ್ ಫುಟ್ಬಾಲ್ ನಲ್ಲಿ ಅಪ್ರತಿಮ ಆಟಗಾರರಾದ ಲಿಯೋನಲ್ ಮೆಸಿ, ನೈಮರ್, ಕ್ರಿಸ್ಟಿಯಾನೋ ರೊನಾಲ್ಡೋ, ಗೇಬ್ರಿಯಲ್, ಥಾಮಸ್ ಮುಲ್ಲರ್ ಗೋಲು ಬಾರಿಸುವ ನೆಚ್ಚಿನ ಆಟಗಾರರೆನಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions