ಸುಭಾಷಿತ :

Monday, September 23 , 2019 3:53 PM

ಫೈಬರ್ ಯುಕ್ತ ಆಹಾರ ಸೇವಿಸಿ ಅರೋಗ್ಯ ಸಮಸ್ಯೆಗಳನ್ನು ದೂರ ಮಾಡಿ


Friday, May 17th, 2019 5:32 pm

ಸ್ಪೆಷಲ್ ಡೆಸ್ಕ್ : ನಾರಿನಾಂಶವಿರುವ ಆಹಾರ ಸೇವನೆಯಿಂದ ನಮ್ಮ ದೇಹದ ಕೊಬ್ಬಿನ ಪ್ರಮಾಣ ತಗ್ಗಿ, ಮಲವಿಸರ್ಜನೆ ಸುಲಭವಾಗಿ ಆಗುತ್ತದೆ. ಹಲವಾರು ಕಾಯಿಲೆಗಳನ್ನು ನಿವಾರಣೆ ಮಾಡಿ ಆರೋಗ್ಯದಿಂದ ಇರಲು ಇದು ಸಹಾಯ ಮಾಡುತ್ತದೆ. ನಾರಿನಾಂಶವಿರುವ ಆಹಾರ ಸೇವನೆಯಿಂದ ಉಂಟಾಗುವಂತಹ ಪ್ರಯೋಜನಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ…

ತೂಕ ಇಳಿಕೆ : ನಾರಿನ ಪದಾರ್ಥಗಳು ಕರುಳಿನಲ್ಲಿ ಹೆಚ್ಚಿನ ಪೌಷ್ಠಿಕಾಂಶಗಳನ್ನು ಹೀರಲು ಬಿಡದೆ ಹಾಗೆಯೇ ಉಳಿಸಿ ನಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ನಾವು ಕಡಿಮೆ ತಿನ್ನುತ್ತೇವೆ. ಓಟ್ಸ್‌ ಇತ್ಯಾದಿ ಪದಾರ್ಥಗಳು ಇದಕ್ಕೆ ಉತ್ತಮ ಉದಾಹರಣೆ.

ಬ್ಲಡ್‌- ಶುಗರ್‌ ಕಡಿಮೆ ಮಾಡುತ್ತೆ : ನಾರಿನಾಂಶ ಹೊಂದಿರುವ ಆಹಾರ ಪದಾರ್ಥಗಳಲ್ಲಿ ಸಕ್ಕರೆಯ ಅಂಶ ಕಡಿಮೆಯಿರುತ್ತದೆ. ಶರ್ಕರ ಪಿಷ್ಟಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವಾಗ ಅದನ್ನು ಅಪಾಯಕಾರಿ ಮಟ್ಟಕ್ಕೆ ಹೋಗದಂತೆ ಫೈಬರ್‌ಗಳು ತಡೆಯುತ್ತದೆ.

ಹೃದಯಾಘಾತ ತಡೆ : ನಾರಿನಾಂಶ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಹೃದಯಾಘಾತವಾಗುವುದು ಶೇಕಡಾ 40ರಷ್ಟು ಕಡಿಮೆಯಾಗುತ್ತದೆ.

ಕೊಬ್ಬನ್ನು ಕರಗಿಸುತ್ತದೆ : ನಾರಿನಾಂಶವಿರುವ ಓಟ್ಸ್‌, ಬಾರ್ಲಿ, ಕಿತ್ತಳೆ ಸೇಬು ಹಣ್ಣುಗಳು ನಮ್ಮ ದೇಹದಲ್ಲಿ ಕೊಬ್ಬು, ಸಕ್ಕರೆ ಶೇಖರವಾಗದಂತೆ ತಡೆಯುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions