ಸುಭಾಷಿತ :

Monday, September 23 , 2019 3:53 PM

ಕತ್ತರಿಸಿದ ಹಣ್ಣುಗಳನ್ನು ಫ್ರೆಶ್ ಆಗಿರುವಂತೆ ಕಾಪಾಡೋದು ಹೇಗೆ?


Monday, June 17th, 2019 1:09 pm

ಸ್ಪೆಷಲ್ ಡೆಸ್ಕ್ : ಹಣ್ಣು ಮತ್ತು ತರಕಾರಿಯನ್ನ ಕತ್ತರಿಸಿ ಇಟ್ಟ ಸ್ವಲ್ಪ ಸಮಯದಲ್ಲೇ ಹಾಳಾಗುತ್ತದೆ. ಇಂತಹ ಸಂದರ್ಭದಲ್ಲಿ ಇವುಗಳನ್ನು ಕೆಡದಂತೆ ರಕ್ಷಿಸಲು ಕೆಲವೊಂದು ವಿಧಾನಗಳನ್ನು ಪಾಲಿಸಬೇಕು. ಅವುಗಳನ್ನು ಪಾಲಿಸಿದರೆ ತುಂಬಾ ಸಮಯದವರೆಗೆ ಹಣ್ಣುಗಳು ಫ್ರೆಶ್ ಆಗಿರುತ್ತದೆ.

ನಿಂಬೆ ರಸ : ಹಣ್ಣುಗಳನ್ನು ಬೇರೆ ಬೇರೆಯಾಗಿ ಕತ್ತರಿಸಿ, ಬೇರೆ ಬೌಲ್‌ಗಳಲ್ಲಿ ಹಾಕಿ ನಂತರ ನಿಂಬೆ ರಸವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಹಣ್ಣಗಳ ಮೇಲೆ ಸಿಂಪಡಿಸಿದರೆ ಹಣ್ಣುಗಳು ಆರು ಗಂಟೆಗಳವರೆಗೆ ಕೆಡದೆ ಹಾಗೇ ಉಳಿಯುತ್ತದೆ.

ಪ್ಲಾಸ್ಟಿಕ್‌ ಕವರ್‌ : ಹಣ್ಣುಗಳನ್ನು ಕತ್ತರಿಸಿ ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ, ನಂತರ ಪ್ಲಾಸ್ಟಿಕ್‌ ಕವರ್‌ ಮೇಲೆ ಸಣ್ಣ ರಂಧ್ರಗಳನ್ನು ಮಾಡಿ. ಹೀಗೆ ಮಾಡುವುದರಿಂದ 3-4 ಗಂಟೆಗಳವರೆಗೆ ಹಣ್ಣು ಹಾಗೇ ಉಳಿಯುತ್ತದೆ.

ಸಿಟ್ರಿಕ್‌ ಆ್ಯಸಿಡ್ : ಲೆಮೆನ್‌ ಜ್ಯೂಸ್‌ ಬದಲಾಗಿ ಸಿಟ್ರಿಕ್‌ ಆ್ಯಸಿಡ್‌ನ ಪುಡಿಯನ್ನುಬಳಕೆ ಮಾಡುವುದರಿಂದ ಹಣ್ಣುಗಳನ್ನು ಇನ್ನು ಹೆಚ್ಚು ಕಾಲ ಫ್ರೆಶ್‌ ಆಗಿರುವಂತೆ ನೋಡಿಕೊಳ್ಳಬಹುದು. ಇದನ್ನು ಬಳಕೆ ಮಾಡುವುದರಿಂದ 10 ರಿಂದ 12 ಗಂಟೆಗಳ ಕಾಲ ಹಣ್ಣುಗಳನ್ನು ಕೆಡದಂತೆ ಇಡಬಹುದು.

ಕೋಲ್ಡ್‌ ವಾಟರ್‌ : ಹಣ್ಣುಗಳನ್ನು ಕೋಲ್ಡ್‌ ವಾಟರ್‌ನಲ್ಲಿ ಹಾಕಿ ರಕ್ಷಿಸುವುದರಿಂದ 3 ರಿಂದ 4 ಗಂಟೆಗವರೆಗೆ ಇದು ಕೆಡದೇ ಇರುತ್ತದೆ. ಐಸ್ ಹಣ್ಣುಗಳನ್ನು ಕೆಡದಂತೆ ಇಡಲು ಹಾಗೂ ಫ್ರೆಶ್ ಆಗಿರುವಂತೆ ನೋಡಿಕೊಳ್ಳಲು ಸಹಾಯಕವಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions