ಸುಭಾಷಿತ :

Tuesday, September 17 , 2019 6:57 AM

-->

ವೈರಲ್‌ ವಿಡಿಯೋ: ರಶ್ಮಿಕಾ ಕಾಲಿನ ಮೇಲೆ ತನ್ನ ಕಾಲು ಹಾಕಿದ ‘ಅಜ್ಜ’ ವಿಜಯ್ ದೇವರಕೊಂಡ


Thursday, August 15th, 2019 7:05 pm


ಹೈದರಾಬಾದ್: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡಕ್ಕಿಂತ ಹೆಚ್ಚು ಅನ್ಯಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ವಿಜಯ್‌ ದೇವರಕೊಂಡ ಜೊತೆಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವುದು ಹೆಚ್ಚು. ನಟ ವಿಜಯ್ ದೇವರಕೊಂಡರೊಂದಿಗೆ ನಟಿಸಿದ್ದ ‘ಡಿಯರ್ ಕಾಮ್ರೇಡ್’ ಸಿನಿಮಾ ಬಿಡುಗಡೆಯಾಗಿದ್ದು ಬಾಕ್ಸ್‌ ಆಫಿಸ್‌ನಲ್ಲಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ನಟ ವಿಜಯ್ ದೇವರಕೊಂಡ, ರಶ್ಮಿಕಾ ಅವರ ಕಾಲಿನ ಮೇಲೆ ಕಾಲು ಹಾಕಿರುವ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ನಾನು ನಮ್ಮ ತಾತ ಹಾಗೂ ಅಜ್ಜಿಗೆ ಪ್ರತಿದಿನ ಅವರ ಕಾಲುಗಳನ್ನು ಒತ್ತುತ್ತಿದ್ದೆ. ಈಗ ನನ್ನನ್ನು ತಾತ ಅಂದ್ಯಲ್ಲಾ, ನೀನು ನನ್ನ ಕಾಲು ಒತ್ತಬೇಕು ಎಂದು ದೇವರಕೊಂಡ ಕ್ರೇಜಿ ಪ್ರತಿಕ್ರಿಯೆ ನೀಡಿದ್ದರು. ಇದರಿಂದ ಕೋಪಗೊಳ್ಳದ ರಶ್ಮಿಕಾ ನಿಧಾನವಾಗಿ ದೇವರಕೊಂಡ ಕಾಲನ್ನು ಕೆಳಕ್ಕೆ ಇಳಿಸಿದ್ದಾರೆ. ಸಾರ್ವಜನಿಕ ಸಂದರ್ಶನವೊಂದರಲ್ಲಿ ನಟಿಯೊಂದಿಗೆ ದೇವರಕೊಂಡ ರೀತಿ ಉತ್ತಮವಲ್ಲ ಜನ ಮಾತನಾಡಿಕೊಳ್ಳುತ್ತಿದ್ದಾರೆ. . ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions