ಸುಭಾಷಿತ :

Thursday, January 23 , 2020 5:56 PM

ಡಯಟ್ ನಲ್ಲಿ ಈ ಆಹಾರಗಳನ್ನು ಸೇವಿಸಿದರೆ ಕಣ್ಣಿನ ಸಮಸ್ಯೆಗಳೇ ಬರೋದಿಲ್ಲ…


Wednesday, August 21st, 2019 12:28 pm

ಸ್ಪೆಷಲ್ ಡೆಸ್ಕ್ : ಮಧ್ಯ ವಯಸ್ಸಿನ ನಂತರ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಅದು ಕಣ್ಣಿನ ಸಮಸ್ಯೆ. ಹಲವಾರು ಕಾರಣಗಳಿಂದ ಕಣ್ಣು ಮಂಜಾಗುವುದು, ಕಣ್ಣು ಕಾಣದಾಗುವುದು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಲು ಮುಖ್ಯವಾಗಿ ಡಯಟ್ ನಲ್ಲಿ ಸೇವಿಸುವ ಆಹಾರಗಳ ಬಗ್ಗೆ ಗಮನ ಹರಿಸಬೇಕು.

ಪ್ರತಿನಿತ್ಯ ಡಯಟ್ ನಲ್ಲಿ ಈ ಆಹಾರಗಳನ್ನು ಸೇವಿಸಿದರೆ ಕಣ್ಣಿನ ಸಮಸ್ಯೆಗಳೆಲ್ಲಾ ದೂರವಾಗುತ್ತವೆ..

ಕ್ಯಾರೆಟ್‌ : ಕ್ಯಾರೆಟ್‌ ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಇದನ್ನು ನೀವು ನಿಮ್ಮ ಡಯಟ್‌ನಲ್ಲಿ ಅನುಸರಿಸಬೇಕು. ಇದನ್ನು ಪ್ರತಿ ದಿನ ಸೇವನೆ ಮಾಡುವ ಮೂಲಕ ಕನ್ನಡಕದಿಂದ ಮುಕ್ತಿ ಹೊಂದಬಹುದು.

ಹಸಿರು ತರಕಾರಿಗಳು : ಲೂಟಿನ್‌ ಮತ್ತು ಜಿಯಾಕ್ಸ್‌ಥೀನ್‌ ನಮ್ಮ ಕಣ್ಣಿಗೆ ಅತ್ಯುತ್ತಮ ಆಹಾರ. ಇದು ಹೆಚ್ಚಾಗಿ ಹಸಿರು ತರಕಾರಿಗಳಲ್ಲಿರುತ್ತದೆ. ಇದನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕಣ್ಣಿಗೆ ಶಕ್ತಿ ದೊರಕಿ ದೃಷ್ಟಿ ಉತ್ತಮವಾಗುತ್ತದೆ.

ಮೊಟ್ಟೆ : ಮೊಟ್ಟೆಯಲ್ಲಿ ಸಹ ಸತು ಮತ್ತು ಲೂಟಿನ್‌ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಕಣ್ಣಿನ ಎಲ್ಲಾ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ನೇರಳೆ ಹಣ್ಣು : ನೇರಳೆ ಹಣ್ಣಿನಲ್ಲಿ ವಿಟಾಮಿನ್‌ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಕಣ್ಣನ್ನು ರಕ್ಷಿಸುವುದರ ಜೊತೆಗೆ ಕಣ್ಣಿಗೆ ಪೊರೆ ಬರುವುದನ್ನು ಕಡಿಮೆ ಮಾಡುತ್ತದೆ.

ಬಾದಾಮ್‌ : ವಿಟಾಮಿನ್‌ ಈ ಕಣ್ಣಿನ ದೃಷ್ಟಿದೋಷ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕಣ್ಣಿನ ರೋಗ ಮೆಕ್ಯೂಲರ್‌ ಡಿಜನರೇಶನ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions