‘ತೋತಾಪುರಿ’ ಫಸ್ಟ್ ಲುಕ್ ನಲ್ಲಿ ಮಿಂಚುತ್ತಿರುವ ನವರಸ ನಾಯಕ ’ಜಗ್ಗೇಶ್‌”


Wednesday, March 13th, 2019 6:48 pm

ಸಿನಿಮಾಡೆಸ್ಕ್: ಜಗ್ಗೇಶ್ ಮತ್ತೊಮ್ಮೆ ನಗಿಸಲು ಬರುತ್ತಿದ್ದಾರೆ ಎಂಬುದಕ್ಕೆ ‘ತೋತಾಪುರಿ’ ಚಿತ್ರದ ಮೂಲಕ ನಮ್ಮನ್ನು ನಗಿಸಲು ಬರುತ್ತಿದ್ದಾರೆ. ಮಾ.16 ಶನಿವಾರ ಜಗ್ಗೇಶ್ ಅವರ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ಅವರ ಜನ್ಮದಿನಕ್ಕೆ ‘ತೋತಾ ಪುರಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಚಿತ್ರದ ಫಸ್ಟ್ ಲುಕ್ ಜತೆ ‘ತೋತಾಪುರಿ’ಯಲ್ಲಿನ ವಿಶೇಷತೆಗಳನ್ನು ನಿರ್ದೇಶಕ ವಿಜಯ್ ಪ್ರಸಾದ್ ಮಾತನಾಡಿದ್ದು, ಜಗ್ಗೇಶ್ ಅವರ ಪಾಲಿಗೆ ಇದು ಮತ್ತೊಂದು ಹೈ ಬಜೆಟ್ ಸಿನಿಮಾ. ನಿರ್ಮಾಪಕ ಕೆಎ ಸುರೇಶ್ ಅವರು ಯಾವು ದಕ್ಕೂ ಕಡಿಮೆ ಮಾಡಿಲ್ಲ. ಮೇಕಿಂಗ್ ಅದ್ದೂರಿಯಾಗಿ ಮೂಡಿ ಬಂದಿದ್ದು, ಜಗ್ಗೇಶ್ ನಟನೆಯ ಅಥವಾ ನನ್ನ ನಿರ್ದೇಶನದ ಸಿನಿಮಾಗಳು ಇಷ್ಟು ದಿನ ಚಿತ್ರೀಕರಣಗೊಂಡಿಲ್ಲ. ಮೈಸೂರು, ಚನ್ನಪಟ್ಟಣ, ಕೂರ್ಗ್ ಮುಂತಾದ ಕಡೆ ಇನ್ನೂ ಚಿತ್ರೀಕರಣ ನಡೆಯುತ್ತಿದೆ. ಸ್ಟಾರ್ ನಟರ ಸಿನಿಮಾಗಳಿಗೆ ವೆಚ್ಚ ಮಾಡುವ ಬಜೆಟ್ ಈ ಚಿತ್ರಕ್ಕೆ ಹಾಕಲಾಗಿದೆ ಅಂತ ಹೇಳಿದ್ದಾರೆ. ನೀರ್‌ದೋಸೆ’ ಕಾಂಬಿನೇಷನ್ ಇದೆ. ಆದರೆ, ಆ ಚಿತ್ರಕ್ಕೂ ಮೀರಿದ ಕತೆ ಹಾಗೂ ಮನರಂಜನೆ ಈ ಚಿತ್ರದಲ್ಲಿದೆ. ಈ ಕಾರಣಕ್ಕೆ ‘ನೀರ್‌ದೋಸೆ’ಗಿಂತ ‘ತೋತಾಪುರಿ’ ಮತ್ತೊಂದು ಮೈಲುಗಲ್ಲಿನ ಸಿನಿಮಾ ಆಗಲಿದೆ.

ಇನ್ನು ನಾಯಕಿ ಮುಸ್ಲಿಂ ಪಾತ್ರ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಪಾತ್ರ. ದತ್ತಣ್ಣ ಅವರದ್ದು ಜಗ್ಗೇಶ್ ಅವರ ಮಾವನ ಪಾತ್ರದಲ್ಲಿ ಮಿಂಚಿದ್ದಾರೆ.  ಧನಂಜಯ್ ಹಾಗೂ ಜಗ್ಗೇಶ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರ ಪಾತ್ರಗಳು ಇದುವರೆಗೂ ಬಹಿರಂಗಗೊಂಡಿಲ್ಲ. ಇದು ಚಿತ್ರದ ಬಹು ದೊಡ್ಡ ಕುತೂಹಲಕಾರಿ ಅಂಶವಾಗಿದ್ದು, ಸ್ಯಾಂಡಲ್‌ ವುಡ್ ನ ಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡುವುದರಲ್ಲಿ ಸಂಶಯವಿಲ್ಲ. ಜಗ್ಗೇಶ್ ಅವರ ಹುಟ್ಟುಹಬ್ಬದಂದೇ ಈ ಚಿತ್ರದ ಫಸ್ಟ್ ಬಿಡುಗಡೆ ಮಾಡಲಾಗುತ್ತಿದೆ. ಅದರ ಜಲಕ್ ನಿಮ್ಮ ಮುಂದೆ ಇದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions