ಹುಡುಗಿಯರ ಸ್ತನದಲ್ಲಿ ವ್ಯತ್ಯಾಸ ಯಾಕೆ..? ಇಲ್ಲಿದೆ ನೋಡಿ ಉತ್ತರ


Saturday, February 10th, 2018 8:22 pm

ಸ್ಪೆಷಲ್ ಡೆಸ್ಕ್: ಹೆಣ್ಣು ದೇವರ ಸೃಷ್ಟಿ. ಇದುವೇ ಪ್ರಕೃತಿಯಲ್ಲಿರುವ ವೈವಿಧ್ಯತೆ.  ಮನುಷ್ಯರ ದೇಹದ ವಿಷಯದಲ್ಲೂ ವೈವಿಧ್ಯತೆ ಇದೆ. ಕೆಲವೊಂದು ಅಂಗಗಳು, ಭಾಗಗಳು ಕೆಲವು ಪ್ರಾಂತ್ಯದ ಜನರಲ್ಲಿ ದೊಡ್ಡದಿರುತ್ತವೆ. ಮತ್ತು ಇನ್ನೊಂದು ಪ್ರಾಂತ್ಯದ ಜನರಲ್ಲಿ ಚಿಕ್ಕದಿರುತ್ತವೆ. ಒಂದೇ ಜಾಗದಲ್ಲಿರುವ ಜನರಲ್ಲಿ  ಹಲವಾರು ದೈಹಿಕ ಅಸಮಾನತೆಗಳು ಇರುತ್ತದೆ. ಇವುಗಳಲ್ಲಿ ಸ್ತನದ ಗಾತ್ರವು ಕೂಡ ಒಂದು. ಸ್ತನಗಳ ಗಾತ್ರವು ಒಂದು ಹೆಣ್ಣಿನಿಂದ ಇನ್ನೊಂದು ಹೆಣ್ಣಿಗೆ ಬೇರೆ ಆಗಿರುತ್ತದೆ.

ಕಾರಣ ಇದು..! ಮುಖ್ಯವಾಗಿ ಹುಡುಗಿಯರ ದೇಹದ ತೂಕದಲ್ಲಿನ ಏರುಪೇರು, ಔಷಧಿ ಸೇವನೆ, ಪ್ರೆಗ್ನನ್ಸಿ ಮತ್ತು ಋತುಸ್ರಾವ ಇವೆಲ್ಲವೂ ಸ್ತನಗಳ ಗಾತ್ರದ ಮೇಲೆ ಪ್ರಭಾವ ಬೀರುತ್ತದೆ. ಆದರೆ ಇವೆಲ್ಲವುಗಳಿಗಿಂತ ಮುಖ್ಯವಾಗಿ  ಏಳು ಜೆನೆಟಿಕ್ ಮಾರ್ಕರ್ಸ್  ಮೇಲೆ ಸ್ತನಗಳ ಗಾತ್ರವು ಅವಲಂಬಿತವಾಗಿರುತ್ತದೆ. ಪ್ರತಿಯೊಂದು ಹೆಣ್ಣಿನ ಸ್ತನಗಳ ಗಾತ್ರವು ವಿಭಿನ್ನವಾಗಿರುತ್ತದೆ. ಆಕೆ ತನ್ನ ಅಪ್ಪ-ಅಮ್ಮನಿಂದ ವಿಭಿನ್ನವಾದ ಸ್ತನಗಳಿಗೆ ಸಂಬಂಧಿಸಿದ ಡಿಎನ್ ಎ ಗುಂಪನ್ನು ಪಡೆದುಕೊಂಡಿರುತ್ತಾಳೆ.

ಆದರೆ ಈ ಗಾತ್ರದಲ್ಲಿನ ವ್ಯತ್ಯಾಸವು ಕೇವಲ ಒಂದು ಹೆಣ್ಣಿನಿಂದ ಇನ್ನೊಂದು ಹೆಣ್ಣಿಗೆ ಮಾತ್ರ ಇರಲ್ಲ. ಒಂದೇ ಹೆಣ್ಣಿನಲ್ಲಿ ಒಂದು ಸ್ತನದ ಗಾತ್ರ ದೊಡ್ಡದು ಮತ್ತು ಇನ್ನೊಂದು ಚಿಕ್ಕದು ಕೂಡ ಇರಬಹುದು. ಹೆಣ್ಣು ಪ್ರೌಢಾವಸ್ಥೆಗೆ ಕಾಲಿಟ್ಟಾಗ, ಆಕೆಯ ದೇಹದಲ್ಲಿರುವ ಈಸ್ಟ್ರೋಜೆನ್ (ಮದಜನಕ) ಎಂಬ ಹಾರ್ಮೋನ್ ಮೊದಲ ಹಂತದ ಸ್ತನದ ಬೆಳವಣಿಗೆಗೆ ಚಾಲನೆ ನೀಡುತ್ತದೆ. ಆದರೆ ಈ ಎರಡು ಬೆಳೆಯುತ್ತಿರುವ ಸ್ತನಗಳಿಗೆ ಸಮನಾಗಿ ಹಾರ್ಮೋನ್ ಗಳು ಸಿಗಲೇಬೇಕು ಎಂದೇನಿಲ್ಲ.

ಹೀಗಾಗಿ ಒಂದು ಸ್ತನವು ತುಂಬಾ ವೇಗವಾಗಿ ಬೆಳೆಯುತ್ತದೆ ಮತ್ತು ಇನ್ನೊಂದು ಮೆಲ್ಲನೆ ಬೆಳೆಯುತ್ತದೆ. ಹೀಗೆ ಪ್ರೌಢಾವಸ್ಥೆಯ ಮೊದಲ ಹಂತದಲ್ಲಿಯೇ ಕಾಣಿಸಿಕೊಳ್ಳುವ ಈ ತೊಂದರೆ ಹೆಂಗಸರು ಬೆಳೆದಂತೆ ಕಡಿಮೆಯಾಗಿ ಅವರು ವಯಸ್ಕರರಾಗುವಷ್ಟರಲ್ಲಿ ಈ ಸಮಸ್ಯೆ ಮಾಯವಾಗುತ್ತದೆ. ಆದರೆ ಸುಮಾರು 25% ಅಷ್ಟು ಹೆಂಗಸರಿಗೆ ಈ ತೊಂದರೆ ಹಾಗೆಯೇ ಉಳಿದುಬಿಡುತ್ತದೆ. ಇದುವೇ ನೈಜ ಕಾರಣ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions