ಸುಭಾಷಿತ :

Saturday, October 19 , 2019 4:38 PM

‘ಎಲ್ಲಿದ್ದೆ ಇಲ್ಲಿ ತನಕ’ ಟೈಟಲ್‌ ವಿಡಿಯೋ ಸಾಂಗ್‌ ರಿಲೀಸ್‌, ಲವರ್‌ ಬಾಯ್‌ ಲುಕ್‌ನಲ್ಲಿ ‘ಟಾಕಿಂಗ್‌ ಸ್ಟಾರ್‌ ಸೃಜ ಮಿಂಚಿಂಗ್‌’


Monday, September 16th, 2019 2:06 pm

ಸಿನಿಮಾಡೆಸ್ಕ್‌: ನಟ ಸೃಜನ್‌ ಲೋಕೇಶ್ ಅವರು ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವ ವಿಷಯ ನಿಮಗೆಲ್ಲ ಈಗಾಗಲೇ ತಿಳಿದಿದೆ.

ಈಗಾಗಲೇ ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರೋ ಈ ಚಿತ್ರದ ಟೀಸರ್ ಮತ್ತು ಟೈಟಲ್ ಟ್ರ್ಯಾಕ್‍ಗಳು ಈಗಾಗಲೇ ಹೊರಬಂದು ಹಿಟ್ ಆಗಿದೆ ಕೂಡ, ಸೋನ್‌ ನಿಗಮ್ ಅವರ ಕಂಠದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ‘ಎಲ್ಲಿದ್ದೆ ಇಲ್ಲಿ ತನಕ’ ಟೈಟಲ್‌ ವಿಡಿಯೋ ಸಾಂಗ್‌ ರಿಲೀಸ್‌ ಆಗಿದ್ದು, ಲವರ್‌ ಬಾಯ್‌ ಲುಕ್‌ನಲ್ಲಿ ಟಾಕಿಂಗ್‌ ಸ್ಟಾರ್‌ ಸೃಜ ಸಖತ್‌ ಆಗಿ ಮಿಂಚಿದ್ದಾರೆ.

ಇನ್ನು ಸೃಜನ್‌ ಅವರಿಗೆ ಜೋಡಿಯಾಗಿ ಹರಿಪ್ರಿಯಾ ಕೂಡ ಇಲ್ಲಿ ವಿಶೇಷವಾದ ಗೆಟಪ್ಪಿನಲ್ಲಿ, ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದು, . ಆಕ್ಷನ್, ಕಾಮಿಡಿ, ಫ್ಯಾಮಿಲಿ ಸಬ್ಜೆಕ್ಟ್ ಸೇರಿದಂತೆ ಎಲ್ಲ ಅಂಶಗಳನ್ನೂ ಹದವಾಗಿ ಬರೆಸಿದ ಮಜವಾದ ಕಥೆ ಈ ಚಿತ್ರದಲ್ಲಿದೆಯಂತೆ. ಒಟ್ಟಿನಲ್ಲಿ ಸೃಜನ್ ಅವರನ್ನು ಹೊಸ ಗೆಟಪ್‌ನಲ್ಲಿ ನೋಡಬಹುದಾಗಿದ್ದು, ಆ ಅಂದವನ್ನು ತೆರೆ ಮೇಲೆ ಕಣ್ಣು ತುಂಬಿಕೊಳ್ಳಬೇಕಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions