-->

ಬ್ರೇಕಿಂಗ್ : ‘ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯ’ ಶೇ.61.94 ರಷ್ಟು ಮತದಾನ ದಾಖಲು


Thursday, April 18th, 2019 6:02 pm

ಎಲೆಕ್ಷನ್‌ ಡೆಸ್ಕ್: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ಕೆಲ ನಿಮಿಷಗಳ ಹಿಂದಷ್ಟೆ ಮುಕ್ತಾಯವಾಗಿದೆ. ಚುನಾವಣಾ ಆಯೋಗದ Voter Turnout ಆ್ಯಪ್ ನೀಡಿದ ಮಾಹಿತಿಯ ಅಂದಾಜಿನ ಪ್ರಕಾರ ಸಮಯ 6 ಗಂಟೆ ಸುಮಾರಿಗೆ ಶೇ.61.94 ರಷ್ಟು ಆಗಿದೆ. ಇನ್ನು ಜಿಲ್ಲಾವಾರು ಮತದಾನದ ಶೇಕಡವಾರು ವಿವರ ಇಲ್ಲಿದೆ.

ಉಡುಪಿ ಚಿಕ್ಕಮಗಳೂರು – 69.84%
ಹಾಸನ – 71.20%
ದಕ್ಷಿಣ ಕನ್ನಡ – 72.97%
ಚಿತ್ರದುರ್ಗ – 61.75%
ತುಮಕೂರು – 70.28%
ಮಂಡ್ಯ – 71.25%
ಮೈಸೂರು – 63.20%
ಚಾಮರಾಜನಗರ – 66.51%
ಬೆಂಗಳೂರು ಗ್ರಾಮಾಂತರ – 59.43%
ಬೆಂಗಳೂರು ಉತ್ತರ – 48.28%
ಬೆಂಗಳೂರು ಕೇಂದ್ರ – 42.43%
ಕೋಲಾರ – 69.99%
ಚಿಕ್ಕಬಳ್ಳಾಪುರ – 69.33%
ಬೆಂಗಳೂರು ದಕ್ಷಿಣ – 49.36%

ರಾಜ್ಯದಲ್ಲಿ ಬಹುತೇಕ ಶಾಂತಿಯುತವಾಗಿ ಮತದಾನವಾಗಿದ್ದು, ಮತದಾನದ ಸಮಯ ಮುಗಿಯುವ ಮುನ್ನ ಸರತಿ ಸಾಲಿನಲ್ಲಿ ನಿಂತುಕೊಂಡಿರುವವರಿಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಇಂದು ರಾಜ್ಯದ 14 ಲೋಕಸಭಾ  ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ಬೆಳಗ್ಗೆ 7 ರಿಂದ ಸಂಜೆ 6 ರತನಕ ನಡೆದಿತ್ತು. ಒಟ್ಟು  14 ಕ್ಷೇತ್ರಗಳಿಂದ ಒಟ್ಟು 241 ಅಭ್ಯರ್ಥಿ ಕಣದಲ್ಲಿದ್ದರು.

(ಚುನಾವಣಾ ಆಯೋಗದ Voter Turnout ಆ್ಯಪ್ ನೀಡಿರುವ ಮಾಹಿತಿ ಇದಾಗಿದ್ದು, ಚುನಾವಣಾ ಆಯೋಗದ ಅಧಿಕೃತ ಮಾಹಿತಿ ಅಂತಿಮವಾಗಿರುತ್ತದೆ)

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions