ಸುಭಾಷಿತ :

Friday, November 22 , 2019 6:47 AM

ಎಗ್ ಮಂಚೂರಿಯನ್ ಮನೆಯಲ್ಲೇ ಮಾಡಿ ನೋಡಿ..


Wednesday, October 9th, 2019 1:05 pm

ಸ್ಪೆಷಲ್ ಡೆಸ್ಕ್ : ನೀವು ಇಲ್ಲಿವರೆಗೆ ಗೋಬಿ, ಮಶ್ರೂಮ್, ಬೇಬಿ ಕರ್ನ್ ಮಂಚೂರಿ ತಿಂದಿದ್ದೀರಿ. ಈ ಬಾರಿ ಎಗ್ ಮಂಚೂರಿಯನ್ ಮಾಡಿ ನೋಡಿ. ಎಗ್ ಮಂಚೂರಿಯನ್ ಮಾಡೋದು ಹೇಗೆ ಅನ್ನೋ ಯೋಚನೆ ಬೇಡ. ಯಾಕಂದ್ರೆ ನಾವೇ ಅದರ ರೆಸಿಪಿ ತಿಳಿಸುತ್ತೇವೆ.

ಬೇಕಾಗುವ ಸಾಮಗ್ರಿಗಳು: 2 ಬೇಯಿಸಿದ ಮೊಟ್ಟೆ, ಈರುಳ್ಳಿ- 1 , ಟೊಮೆಟೊ- 1, ಹಸಿಮೆಣಸಿನಕಾಯಿ- 4, ಕೊತ್ತಂಬರಿ ಸೊಪ್ಪು ಸ್ವಲ್ಪ, ಶುಂಠಿ ಬೆಳ್ಳುಳಿ ಪೇಸ್ಟ್, ಕಾರ್ನ್ ಫ್ಲೋರ್ ೧ ಕಪ್ , ಅಕ್ಕಿ ಹಿಟ್ಟು- ಅರ್ಧ ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಮೆಣಸಿನ ಪುಡಿ, ಟೊಮೆಟೊ ಸಾಸ್ ಸ್ವಲ್ಪ, ಸೋಯಾ ಸಾಸ್ , ಎಣ್ಣೆ ಕರಿಯಲು

ತಯಾರಿಸುವ ವಿಧಾನ:
ಮೊದಲಿಗೆ ಬೇಯಿಸಿಕೊಂಡಿದ್ದ ಮೊಟ್ಟೆಯನ್ನು ಸಣ್ಣಗೆ ನಿಮಗೆ ಬೇಕಾದ ಆಕಾರದಲ್ಲಿ ತುಂಡು ಮಾಡಿ ಇಡಿ.
ಈಗ ಒಂದು ಬೌಲ್ ನಲ್ಲಿ ಜೋಳದ ಹಿಟ್ಟು ಹಾಗೂ ಅಕ್ಕಿ ಹಾಕಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಕ್ಕೆ ಹಸಿಮೊಟ್ಟೆಯ ವೈಟ್ ಭಾಗ ಮತ್ತು ಸ್ವಲ್ಪ ನೀರು , ಉಪ್ಪು ಹಾಕಿ ಚೆನ್ನಾಗಿ ಕಲಸಿ.
ಹಿಟ್ಟು ತಯಾರಾದ ಮೇಲೆ ಅದಕ್ಕೆ ಈಗಾಗಲೇ ಕತ್ತರಿಸಿದ ಮೊಟ್ಟೆ ಇಟ್ಟು ೧೦ ನಿಮಿಷ ಬಿಡಿ.
ಈಗ ಮೊಟ್ಟೆಯನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಗೋಲ್ಡನ್ ಬಣ್ಣ ಬಂದ ನಂತರ ತೆಗೆಯಿರಿ.
ಈಗ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಹಚ್ಚಿದ ಈರುಳ್ಳಿ, ಮೆಣಸಿಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಇಂದರ ನಂತರ ಒಂದು ಹಾಕಿ ಫ್ರೈ ಮಾಡಿಕೊಳ್ಳಿ.
ನಂತರ ಟೊಮೆಟೊ ಮತ್ತು ಸೋಯಾ ಸಾಸ್ ಹಾಗೂ ರುಚಿಗೆ ಬೇಕಾದಷ್ಟು ಉಪ್ಪು, ಖಾರದ ಪುಡಿ ಹಾಕಿ.
ಈಗ ಕರಿದ ಮೊಟ್ಟೆಯನ್ನು ತಯಾರಿಸಿಕೊಂಡ ಮಿಶ್ರಣದಲ್ಲಿ ಹಾಕಿ . ಇದಕ್ಕೆ ಸಣ್ಣಗೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ರುಚಿಯಾದ ಎಗ್ ಮಂಚೂರಿಯನ್ ಸವಿಯಲು ರೆಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions