ಸುಭಾಷಿತ :

Sunday, January 26 , 2020 4:20 AM

ಹಸಿ ಮೊಟ್ಟೆ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮವೇ?


Friday, July 12th, 2019 11:24 am

ಸ್ಪೆಷಲ್ ಡೆಸ್ಕ್ : ಸ್ಟ್ರಾಂಗ್ ಆಗಿರುವ ದೇಹವನ್ನು ಪಡೆಯಲು ಹಸಿ ಮೊಟ್ಟೆಯನ್ನು ತಿನ್ನಲು ಹೇಳುತ್ತಾರೆ. ಜಿಮ್ ಗೆ ಹೋಗುವವರು, ಪೊಲೀಸ್ ಸೇವೆಯಲ್ಲಿ ಇರುವವರು ಸಾಮಾನ್ಯವಾಗಿ ಇದನ್ನೇ ಸೇವಿಸುತ್ತಾರೆ. ಆದರೆ ಇದರಿಂದ ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ ಎನ್ನಲಾಗುತ್ತವೆ. ಅಂತಹ ಸಮಸ್ಯೆಗಳು ಯಾವುವು. ಅದನ್ನು ಹೇಗೆ ನಿವಾರಣೆ ಮಾಡಬಹುದು ನೋಡೋಣ…

  • ಹಸಿ ಮೊಟ್ಟೆಯನ್ನು ನೇರವಾಗಿ ಸೇವಿಸುವುದರಿಂದ ಬ್ಯಾಕ್ಟೀರಿಯಾ ಸೋಂಕು, ಆಹಾರ ನಂಜಾಗುವುದು ಮೊದಲಾದ ಸಮಸ್ಯೆಗಳು ಉಂಟಾಗುತ್ತವೆ.
  • ಈ ಹಸಿ ಮೊಟ್ಟೆಯನ್ನು ಪ್ಯಾಶ್ಚರೀಕರಿಸಿದ ಹಾಲಿನ ಜೊತೆ ಸೇರಿಸಿ ಕುಡಿಯುವುದು ಸುರಕ್ಷಿತ ವಿಧಾನ. ಇದರಿಂದ ಹೆಚ್ಚಿನ ಸಮಸ್ಯೆಗಳು ಉಂಟಾಗುವುದಿಲ್ಲ.
  • ಹಸಿ ಮೊಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿರುವ ಕೊಬ್ಬು ಇರುತ್ತದೆ. ಹೃದಯದ ಸಮಸ್ಯೆಗಳನ್ನು ತಂದೊಡ್ಡುತ್ತದೆ
  • ಹಸಿ ಅಥವಾ ಅರ್ಧಬೇಯಿಸಿದ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ ಅಪಾಯವು ಹೆಚ್ಚಾಗಿರುವುದು. ಯಾಕೆಂದರೆ ಈ ಮೊಟ್ಟೆ ಇಟ್ಟಿರುವಂತಹ ಕೋಳಿಗೆ ಈ ಬ್ಯಾಕ್ಟೀರಿಯಾದ ಸೋಂಕು ತಗುಲಿರಬಹುದು ಅಥವಾ ತುಂಬಾ ಅಸ್ವಚ್ಛವಾಗಿರುವ ಜಾಗದಲ್ಲಿ ಮೊಟ್ಟೆಯನ್ನು ಇಟ್ಟಿರಬಹುದು.ಇದರಿಂದ ಅರೋಗ್ಯ ಸಮಸ್ಯೆ ಕಂಡು ಬರುತ್ತದೆ.
  • ಮೊಟ್ಟೆಯನ್ನು ಹಸಿಯಾಗಿ ಸೇವನೆ ಮಾಡಿದರೆ ಹೊಟ್ಟೆಯ ಸಮಸ್ಯೆ, ಭೇದಿ, ಹೊಟ್ಟೆ ಸೆಳೆತ ಮತ್ತು ಜ್ವರ ಉಂಟಾಗುತ್ತದೆ.
  • ಮಕ್ಕಳು, ವಯೋವೃದ್ಧರು ಮತ್ತು ಗರ್ಭಿಣಿ ಮಹಿಳೆಯರು ಹಸಿ ಮೊಟ್ಟೆ ಸೇವನೆ ಮಾಡಬಾರದು.

ಸೇವನೆ ಮಾಡಲೇಬೇಕೆಂದರೆ ಈ ರೀತಿಯಾಗಿ ಸೇವಿಸಿ…
ಅವಧಿ ಮೀರಿದ ಮೊಟ್ಟೆಗಳನ್ನು ಯಾವತ್ತೂ ಖರೀದಿಸಬೇಡಿ.
ತುಂಬಾ ಕೊಳಕಾಗಿರುವ ಮತ್ತು ಒಡೆದಿರುವ ಮೊಟ್ಟೆ ಬಳಸಬೇಡಿ. ಇದರಿಂದ ರೋಗ ಹರಡುವ ಸಾಧ್ಯತೆ ಇದೆ.
ಹಾಲಿನ ಜೊತೆಗೆ ಹಸಿ ಮೊಟ್ಟೆ ಸೇವಿಸಿದರೆ ಅರೋಗ್ಯ ಸಮಸ್ಯೆ ಕಂಡು ಬರುವುದಿಲ್ಲ.
ಅಪಾಯ ಕಡಿಮೆ ಮಾಡಲು ಪ್ರಿಡ್ಜ್‌ನಲ್ಲಿ ಮೊಟ್ಟೆಗಳನ್ನು ಇಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions