ಸುಭಾಷಿತ :

Monday, September 23 , 2019 3:56 PM

ನುಗ್ಗೇಕಾಯಿ, ಸೊಪ್ಪು, ಹೂವಿನಲ್ಲಿದೆ ಹೇಳರ ಪೋಷಕಾಂಶ : ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಂಶೋಧನೆ.!


Saturday, May 18th, 2019 3:01 pm


ಬೆಂಗಳೂರು : ನುಗ್ಗೇಕಾಯಿ, ನುಗ್ಗೇಕಾಯಿ ಸೊಪ್ಪು, ನುಗ್ಗೇಕಾಯಿ ಹೂವಿನ ಸಾಂಬಾರ್ ಆಂದ್ರೇ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ.? ನುಗ್ಗೇಕಾಯಿ ಸಾಂಬಾರ್ ಮಾಡಿಯೋ, ನುಗ್ಗೇಕಾಯಿ ಸಪ್ಪು, ಹೂವಿನ ಬಸ್ಸಾರ್/ಉಪ್ ಸಾರು ಮಾಡಿ ಮುದ್ದೇ ಊಟ ಮಾಡಿದರೇ ಅದರ ರುಚಿಯೇ ರುಚಿ. ಉಂಡವನೇ ಬಲ್ಲ ಈ ಊಟದ ರುಚಿ.

ಇಂತಹ ನುಗ್ಗೇಕಾಯಿ ಸಪ್ಪು, ಕಾಯಿ, ಹೂವಿನಲ್ಲಿ ಇದೀಗ ಪೋಷಕಾಂಶ ಹೇರಳವಾಗಿ ಸಿಗುತ್ತದೆ. ನೀವು ಆಗಾಗ ಇಂತಹ ಊಟವನ್ನು ಮಾಡುತ್ತಿದ್ದರೇ, ವಾರಕ್ಕೆ ಒಂದೆರಡು ಬಾರಿ ಮಾಡಿಕೊಂಡು ಊಟ ಮಾಡಿ ಎನ್ನುವಂತೆ ಸಂಶೋಧನಾ ವರದಿಯಿಂದ ಮಾಹಿತಿ ಬಹಿರಂಗವಾಗಿದೆ.

ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ(ಎನ್ ಸಿ ಬಿ ಎಸ್) ವಿಜ್ಞಾನಿಗಳು ಇಂತಹ ಮಾಹಿತಯನ್ನು ತಮ್ಮ ಸಂಶೋಧನೆಯಿಂದ ಹೊರಹಾಕಿದ್ದು, ನುಗ್ಗೇಕಾಯಿ ಸೊಪ್ಪು, ಹೂ ಮತ್ತು ಕಾಯಿಯಲ್ಲಿ ಎ, ಸಿ ಮತ್ತು ಇ ಪೌಷ್ಟಿಕಾಂಶಗಳು ಹೇರಳವಾಗಿವೆ ಎಂದು ತಿಳಿಸಿದೆ.

ಇನ್ನೂ ಇದಷ್ಟೇ ಅಲ್ಲದೇ ನುಗ್ಗೇಕಾಯಿ, ಸೊಪ್ಪು, ಹೂ ಸೇವನೆಯಿಂದಾಗಿ ಕೊಬ್ಬು ಕರಗುತ್ತದೆ. ನೀವು ಮಧುಮೇಹದಿಂದ ಬಳಲುತ್ತಾ ಇದ್ದರೇ ಮಧು ಮೇಹ ನಿಯಂತ್ರಣ ಮಾಡುವ ಶಕ್ತಿ ಈ ಉತ್ಪನ್ನಗಳ ಸೇವನೆಯಿಂದ ಸಿಗುತ್ತದೆಯಂತೆ. ಇದಷ್ಟೇ ಅಲ್ಲದೇ ನರಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್ ನಂತಹ ಮಾರಕ ರೋಗಗ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ನಿಮಗೆ ದೊರೆಯುತ್ತದೆ ಎಂದು ಸಂಶೋಧನ ತಂಡದ ಮುಖ್ಯಸ್ಥೆ ಆರ್ ಸೌಧಾಮಿನಿ ತಿಳಿಸಿದ್ದಾರೆ.

ಅಂದಹಾಗೇ ದೇಹದ ಕೊಬ್ಬು ಕರಗಿಸಲು ಸಹಾಯಕವಾದ ಮೌರಿನ್ ಮತ್ತು ಕ್ವರ್ಸೆಟಿನ್, ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಲು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇಕಾದ ಕೇಂಫೆರಾಲ್, ಅರ್ಸೋಲಿಕ್ ಮತ್ತು ಒಲೀನೊಲಿಕ್ ಧಾತುಗಳು ನುಗ್ಗೆ ಕಾಯಿ, ಸೊಪ್ಪು, ಹೂ ವಿನಲ್ಲಿ ಹೇರಳವಾಗಿ ಲಭ್ಯವಾಗುತ್ತವೆಯಂತೆ. ಇದಷ್ಟೇ ಅಲ್ಲದೇ ಬೇರೆ ಸೊಬ್ಬಗಳಿಗಿಂದ ಸುಗ್ಗೆ ಸೊಪ್ಪಿನಲ್ಲಿ ಶೇ.30% ಗಿಂತ ಹೆಚ್ಚಿನ ಕಬ್ಬಿಣಾಂಶ, 100 ಪಟ್ಟು ಕ್ಯಾಲ್ಸಿಯಂ ಇದೆ ಎಂದು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ಸಂಶೋಧನ ವರದಿಯಿಂದ ತಿಳಿದು ಬಂದಿದೆ.

ಸೋ ಇನ್ನು ಯಾಕೆ ತಡ, ನುಗ್ಗೇಕಾಯಿ, ಸೊಪ್ಪು, ಹೂ ಉತ್ಪನ್ನದ ಬಳಕೆ ನಿಮ್ಮ ಅಡುಗೆಯಲ್ಲಿ ಹೆಚ್ಚಾಗಿ ಬಳಸಿ. ಈ ಮೂಲಕ ನಿಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ಹೆಚ್ಚು ಹೆಚ್ಚು ಪಡೆದು, ಸದೃಢವಾಗಿ, ಆರೋಗ್ಯವಂತರಾಗಿ ಇರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions