-->

ನೋಡಲು ವಾವ್ ಎನಿಸುವ ಡ್ರಾಗನ್ ಹಣ್ಣು ತಿನ್ನೋದ್ರಿಂದ ಏನು ಪ್ರಯೋಜನವಿದೆ ಗೊತ್ತಾ?


Friday, April 12th, 2019 1:58 pm

ಸ್ಪೆಷಲ್ ಡೆಸ್ಕ್ : ಡ್ರಾಗನ್ ಹಣ್ಣು ಹೆಸರು ಕೆಲವರು ಕೇಳಿರಬಹುದು. ಕೆಲವರಿಗೆ ಹೆಸರು ಕೇಳುವಾಗಲೇ ಆಶ್ಚರ್ಯವಾಗಬಹುದು. ಈ ಹಣ್ಣು ನೋಡಲು ಡ್ರಾಗನ್ ಅನ್ನು ಹೋಲುವ ಆಕೃತಿ ಇರುವ ಕಾರಣ ಇದಕ್ಕೆ ಡ್ರಾಗನ್ ಹಣ್ಣು ಎಂಬ ಹೆಸರು ಬಂದಿದೆ. ಈ ಹಣ್ಣಿನ ರುಚಿ ಕಿವಿ, ಪೈನಾಪಲ್ ಅನ್ನು ಹೋಲುತ್ತದೆ.

ಡ್ರಾಗನ್ ಹಣ್ಣು ಹೆಚ್ಚಾಗಿ ಅಮೇರಿಕ, ಆಸ್ಟ್ರೇಲಿಯಾಗಳಲ್ಲಿ ಬೆಳೆಯುತ್ತಾರೆ. ಇತ್ತೀಚಿಗೆ ಭಾರತದಲ್ಲೂ ಅಲ್ಲೊಂದು ಇಲ್ಲೊಂದೆಡೆ ಬೆಳೆಯುತ್ತಾರೆ. ಈ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಅಂತ ತಿಳಿಯೋಣ.

  • ಡ್ರಾಗನ್ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯ ಆರೋಗ್ಯವಾಗಿರಲು ಬೇಕಾದಂತಹ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
  • ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆ ಮತ್ತು ಮಲಬದ್ಧತೆಗೆ ನೆರವಾಗಬಲ್ಲದು.
  • ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವಲ್ಲಿ ಡ್ರಾಗನ್ ಫ್ರೂಟ್ ಸಹಾಯ ಮಾಡುತ್ತದೆ.
  • ಡ್ರಾಗನ್ ಹಣ್ಣು ಕ್ಯಾಲ್ಸಿಯಂ, ಫಾಸ್ಫರಸ್, ಐರನ್, ಪ್ರೋಟೀನ್ ಗಳನ್ನು ಒಳಗೊಂಡಿರುತ್ತದೆ. ಇವೆಲ್ಲವೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಈ ಹಣ್ಣಿನಲ್ಲಿ ಇರುವುದರಿಂದ ಮೂಳೆಯ ರಚನೆ ನಿರ್ವಹಿಸಲು ಸಹಾಯ ಮಾಡುತ್ತದೆ.
  • ತೀವ್ರ ಕಿರಿಕಿರಿ ಮತ್ತು ನಿಶ್ಚಲತೆ ಮುಂತಾದ ಸಂಧಿವಾತ ಸಮಸ್ಯೆ ನಿವಾರಣೆ ಮಾಡುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions