ಸುಭಾಷಿತ :

Saturday, October 19 , 2019 4:31 PM

ಡೈನಿಂಗ್ ಟೇಬಲ್ ಅಲ್ಲ… ನೆಲದ ಮೇಲೆ ಕುಳಿತು ಊಟ ಮಾಡಿದರೆ ಆರೋಗ್ಯಕ್ಕೆ ಉತ್ತಮ


Sunday, June 16th, 2019 2:19 pm

ಸ್ಪೆಷಲ್ ಡೆಸ್ಕ್ : ಈಗಿನ ಬದಲಾದ ಕಾಲದಲ್ಲಿ ಜನ ಹೆಚ್ಚಾಗಿ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಾರೆ. ಆದರೆ ನಿಮಗೊತ್ತಾ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಎಂದು. ಅಷ್ಟು ಮಾತ್ರವಲ್ಲ ನಮ್ಮ ಪೂರ್ವಜರು ನೆಲದ ಮೇಲೆಯೇ ಕುಳಿತು ಊಟ ಮಾಡುತ್ತಿದ್ದರು ಅದಕ್ಕಾಗಿ ಅವರು ಬಹು ಕಾಲ ಆರೋಗ್ಯವಾಗಿ ಇರುತ್ತಿದ್ದರು.

ನೆಲದ ಮೇಲೆ ಕುಳಿತು ಊಟ ಮಾಡಿದರೆ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ…

ಜೀರ್ಣಕ್ರಿಯೆ : ನೆಲದ ಮೇಲೆ ಒಂದು ಕಾಲಿನ ಮೇಲೆ ಇನ್ನೊಂದು ಕಾಲಿಟ್ಟು ಊಟ ಮಾಡಿದಾಗ, ಹಾಗೂ ಬಾಗಿ ಊಟ ಮಾಡಿದಾಗ ನಿಮ್ಮ ಹೊಟ್ಟೆ ಮಸಲ್ಸ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ. ಇದರಿಂದ ಜೀರ್ಣ ಕ್ರಿಯೆ ಸುಲಭವಾಗಲು ಇದು ಸಹಾಯ ಮಾಡುತ್ತದೆ. ಜೀರ್ಣ ರಸ ವೇಗವಾಗಿ ತನ್ನ ಕಾರ್ಯಗಳನ್ನು ಮಾಡಲು ಆರಂಭಿಸುತ್ತದೆ.

ಆಯಸ್ಸು ಹೆಚ್ಚುತ್ತದೆ : ಪ್ರತಿದಿನ ನೆಲದಲ್ಲಿ ಕುಳಿತು ಊಟ ಮಾಡಿ, ನೆಲಕ್ಕೆ ಕೈ ಇಡದೆ ಎದ್ದು ನಿಂತರೆ ನಮ್ಮ ಜೀವಿತಾವಧಿಯೂ ಹೆಚ್ಚುತ್ತದೆ. ಇದು ಸಂಶೋಧನೆಯೊಂದರ ಮೂಲಕ ತಿಳಿದು ಬಂದಿದೆ.

ಬೊಜ್ಜು ನಿವಾರಣೆ: ದೇಹವು ಸದೃಢವಾಗುತ್ತದೆ. ದೇಹ ಕೆಳಗಿನ ಭಾಗದ ಮಾಂಸ ಖಂಡಗಳು, ಹೊಟ್ಟೆಯ ಸುತ್ತಲಿನ ಮಾಂಸಗಳು ಎಳೆದಂತಾಗುತ್ತದೆ. ಇದರಿಂದ ನೋವಾಗುವುದು ಕಡಿಮೆಯಾಗುತ್ತದೆ. ಜೊತೆಗೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯ : ನೆಲದಲ್ಲಿ ಕುಳಿತು ಬಾಗಿ ಊಟ ಮಾಡುವುದರಿಂದ ದೇಹದಲ್ಲಿ ಬ್ಲಡ್‌ ಸರ್ಕ್ಯುಲೇಶನ್‌ ಹೆಚ್ಚಾಗುತ್ತದೆ. ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions