-->

ಪತ್ನಿ ಹೇಮಾಮಾಲಿನಿ ಕ್ಷಮೆ ಕೇಳಿದ ಧರ್ಮೇಂದ್ರ! ಕಾರಣ ?


Wednesday, July 17th, 2019 1:16 pm

ಸಿನಿಮಾಡೆಸ್ಕ್ : ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಡಿಯೋಲ್ ಅವರು ತಮ್ಮ ಪತ್ನಿ, ಸಂಸದೆ ಹೇಮಾಮಾಲಿನಿ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ.

ಇತ್ತೀಚೆಗೆ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸಂಸತ್ ಆವರಣದಲ್ಲಿ ಹೇಮಾ ಮಾಲಿನಿ ಕಸ ಗುಡಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿತ್ತು. ಟ್ವೀಟರ್ ನಲ್ಲಿ ಸಿದ್ದ್ ಎಂಬುವರು ಸರ್, ಮೇಡಂ ಜೀವನದಲ್ಲಿ ಒಮ್ಮೆಯಾದರೂ ಪೊರಕೆ ಹಿಡಿದಿದ್ದಾರಾ ಎಂದು ಧರ್ಮೇಂದ್ರ ಅವರನ್ನು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ್ದ ಧರ್ಮೇಂದ್ರ, ಸಿನಿಮಾಗಳಲ್ಲಿ ಪೊರಕೆ ಹಿಡಿದಿದ್ದಾರೆ. ವಿಡಿಯೋ ನೋಡಿದಾಗ ನನಗೂ ಅದೇ ರೀತಿ ಅನ್ನಿಸಿತು. ನಾನು ಬಾಲ್ಯದಲ್ಲಿಯೇ ಅಮ್ಮನ ಕೆಲಸದಲ್ಲಿ ಸಹಾಯ ಮಾಡುತ್ತಿದೆ. ಹಾಗಾಗಿ ನಾನು ಚೆನ್ನಾಗಿ ಕಸ ಗುಡಿಸಬಲ್ಲೆ ಎಂದು ಹೇಳಿದ್ದರು.

https://twitter.com/aapkadharam/status/1151286377910136832

ಟ್ವೀಟ್ ಬಳಿಕ ಪತ್ನಿ ಮುನಿಸಿಕೊಂಡ ಕಾರಣ, ಇಂದು ಧರ್ಮೇಂದ್ರ ಟ್ವೀಟರ್ ನಲ್ಲಿ ಕೈ ಮುಗಿದು ಕುಳಿತಿರುವ ತಮ್ಮ ಸಿನಿಮಾದ ಹಳೆ ಫೋಟೋವನ್ನು ಹಂಚಿಕೊಂಡು ಪತ್ನಿಯ ಕ್ಷಮೆ ಕೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions