ಸುಭಾಷಿತ :

Saturday, October 19 , 2019 4:36 PM

ರಾಜ್ಯ ಸರ್ಕಾರದಿಂದ `ದೇವದಾಸಿಯರಿಗೆ’ ಭರ್ಜರಿ ಸಿಹಿಸುದ್ದಿ : 500 ರೂ.`ಪಿಂಚಣಿ ಭಾಗ್ಯ’ !


Tuesday, September 17th, 2019 6:42 am

ಬೆಂಗಳೂರು :  ರಾಜ್ಯದ ದೇವದಾಸಿಯರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದ 30 ಸಾವಿರ ದೇವದಾಸಿಯರಿಗೆ 500 ರೂ. ಪಿಂಚಣಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಮಾಜ ಕಲ್ಯಾಣ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಭೆಯ ಬಳಿಕ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದು, ರಾಜ್ಯದ 30 ಸಾವಿರ ದೇವದಾಸಿಯರಿಗೆ 500 ರೂ. ಪಿಂಚಣಿ ಭಾಗ್ಯ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಇನ್ನು ದಲಿತರಿಗೆ  ಕೃಷಿ ಇಲಾಖೆಯ ಯಂತ್ರೋಪಕರಣಗಳ ಖರೀದಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ರೇಷ್ಮೆ ಸಾಕಾಣಿಕೆ, ಮನೆ ಕಟ್ಟಲು ಶೇ. 90 ರಷ್ಟು ಸಬ್ಸಿಡಿ ನೀಡಲು ಅನುಮೋದನೆ ನೀಡಲಾಗಿದೆ.  ತೋಟಗಾರಿಕೆ, ಪಾಲಿ ಹೌಸ್ ನಿರ್ಮಾಣಕ್ಕೂ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions