ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಆಗುವ ಅರ್ಹತೆ ಇದೆ : ಆರ್.ವಿ. ದೇಶಪಾಂಡೆ


Saturday, May 18th, 2019 10:58 am

ಬೆಳಗಾವಿ : ದಲಿತ ಸಿಎಂ ಪ್ರಸ್ತಾಪ ವಿಚಾರಕ್ಕೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇದೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಈ ರೀತಿಯ ವಿಚಾರಗಳು ಪ್ರಸ್ತಾಪವಾಗಬಾರದು ಎಂದು ಗರಂ ಆಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೂಡ ಈ ಸಂದರ್ಭದಲ್ಲಿ ದಲಿತ ಸಿಎಂ ವಿಚಾರ ಪ್ರಸ್ತಾಪಿಸುವುದು ಸರಿಯಲ್ಲ. ಅದರ ಅವಶ್ಯಕತೆ ಇದ್ದಿರಲಿಲ್ಲ. ಒಂದು ಕಡೆ ಸಿದ್ದರಾಮಯ್ಯ ಆಗಬೇಕು ಅಂತ ಹೇಳೋದು, ಮತ್ತೊಂದು ಕಡೆ ಮತ್ತೊಬ್ಬರು ಆಗಬೇಕು ಅಂತ ಹೇಳೋದು ಸರಿಯಲ್ಲ. ಈಗಾಗಲೇ ಅಗ್ರಿಮೆಂಟ್ ಆಗಿದೆ ಅಂದಾಗ ಆ ಪ್ರಸ್ತಾಪ ಯಾಕೆ ಬೇಕಿತ್ತು. ಮಾಡೋದಿದ್ರೆ ಮಾಡಿ ಬಿಡಿ, ಅನವಶ್ಯಕ ಚರ್ಚೆ ಯಾಕೆ ಎಂದು ಸಿಎಂ ಹೆಚ್.ಡಿಕೆ ಟಾಂಗ್ ನೀಡಿದರು.

ರಾಜಕಾರಣದಲ್ಲಿ ಬಹಳ ಕಡಿಮೆ ಮಾತಾಡಬೇಕು. ಮಾತುಗಳು ತೂಕದಿಂದ ಕೂಡಿರಬೇಕು. ಆವಾಗ ಅದಕ್ಕೆ ಗೌರವ ಸಿಗುತ್ತದೆ ಇದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ವಿನಾಕಾರಣ ವಾದ ವಿವಾದ, ಸಿಎಂ ಸ್ಥಾನ ಖಾಲಿ ಇದ್ದಾಗ ಯಾರಾಗಬೇಕು, ಯಾರಾಗಬಾರದು ಎಂದು ಚರ್ಚೆ ಮಾಡಲಿ, ಆದ್ರೆ, ಇವತ್ತು ಸಿಎಂ ಸ್ಥಾನ ಖಾಲಿ ಇಲ್ಲ ಎಂದ ಮೇಲೆ ಚರ್ಚೆ ಯಾಕೆ? ಎಂದು ಪ್ರಶ್ನಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions