ಬಿಸಿಲಿನ ಧಗೆಗೆ ದೇಹ ನಿರ್ಜಲೀಕರಣವಾಗುವುದನ್ನು ತಪ್ಪಿಸಲು ಈ ಪಾನೀಯ ಸೇವಿಸಿ…


Friday, March 8th, 2019 11:08 am

ಸ್ಪೆಷಲ್ ಡೆಸ್ಕ್ : ಈ ಬಾರಿ ಬಿಸಿಲಿನ ಬೇಗೆ ಎಂದಿಗಿಂತ ತುಂಬಾನೇ ಹೆಚ್ಚಾಗಿದೆ. ಹೊರಗಡೆ ಹೋಗಿ ಸುತ್ತಾಡಿದರೆ ಸೂರ್ಯನ ಸುಡು ಬಿಸಿಲಿಗೆ ದೇಹದಲ್ಲಿನ ದ್ರವಾಂಶ ಖಾಲಿಯಾಗಿ ದೇಹ ಸೋತು ಬೆಂಡಾಗುತ್ತದೆ. ಈ ಸಮಸ್ಯೆ ನಿವಾರಣೆ ಮಾಡಲು ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ. ಅದಕ್ಕಾಗಿ ನೀವು ನೀರಿನ ಜೊತೆ ಕೆಲವೊಂದು ಹಣ್ಣುಗಳ ಜ್ಯೂಸ್ ಮಾಡಿ ಸೇವನೆ ಮಾಡುವುದು ಉತ್ತಮ.

ಬೆಳಗ್ಗೆ ಮತ್ತು ಮಧ್ಯಾಹ್ನ ಆಹಾರ ಸೇವನೆ ಮಾಡಿದ ನಂತರ ಕಲ್ಲಂಗಡಿ ಹಣ್ಣಿನ ಜ್ಯೂಸ್ ಸೇವಿಸಿ. ಇದು ದೇಹವನ್ನು ತಂಪಾಗಿಡುತ್ತದೆ. ಈ ಜ್ಯೂಸ್‌ಗೆ ಸ್ವಲ್ಪ ಜೇನುತುಪ್ಪ ಮತ್ತು ಒಂದು ಚಿಟಿಕೆ ಉಪ್ಪು ಹಾಕಿ ಕುಡಿದರೆ ದೇಹ ಹೈಡ್ರೇಟ್ ಆಗಿರುತ್ತದೆ. ಇದರಿಂದ ದೇಹ ತೇವಾಂಶವನ್ನು ಬೇಗನೆ ಹೀರಿಕೊಳ್ಳುತ್ತದೆ. ಕಲ್ಲಂಗಡಿ ಜ್ಯೂಸ್‌ಗೆ ಉಪ್ಪು ಮತ್ತು ಸ್ವಲ್ಪ ಕಾಳು ಮೆಣಸಿನ ಪುಡಿ ಹಾಕಿ ಕುಡಿದರೂ ಒಳ್ಳೆಯದು.

ಒಂದು ಗ್ಲಾಸ್ ನೀರಿಗೆ ಸ್ವಲ್ಪ ಪುದಿನಾ ಎಲೆ ಹಾಕಿ ಕುದಿಸಿ. ಇದನ್ನು ಸೋಸಿ ಸ್ವಲ್ಪ ಜೇನುತುಪ್ಪ ಬೆರೆಸಿ ಆ ನೀರನ್ನು ನಿಯಮಿತವಾಗಿ ಕುಡಿದರೆ ನಿರ್ಜಲೀಕರಣ ಉಂಟಾಗುವುದಿಲ್ಲ.

ಮುಳ್ಳು ಸೌತೆಯನ್ನು ಹಾಗೆ ತಿನ್ನುವುದು ಅಥವಾ ಜ್ಯೂಸ್ ಮಾಡಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ. ಇದಕ್ಕೆ ನಿಂಬೆ ಹಣ್ಣಿನ ರಸ ಕೂಡ ಬೆರೆಸಬಹುದು.

ಇನ್ನು ನಿಂಬೆ ಹಣ್ಣಿನ ಜ್ಯೂಸ್ ಮಾಡಿ ಅದಕ್ಕೆ ಸಕ್ಕರೆ ಬದಲು ಜೇನು ತುಪ್ಪ ಬೆರೆಸಿ ಸೇವನೆ ಮಾಡಿ. ಇದಕ್ಕೆ ತುಳಸಿ ಎಲೆಗಳನ್ನು ಹಾಕಿಯೂ ಸೇವನೆ ಮಾಡಬಹುದು. ಇದು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.

ಒಣ ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ನಂತರ ಅದರ ನೀರನ್ನ ಮಾತ್ರ ತೆಗೆದು ಕುಡಿಯಿರಿ. ಇದು ನಿಮ್ಮನ್ನು ಸನ್‌ಸ್ಟ್ರೋಕ್‌ನಿಂದ ರಕ್ಷಿಸುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions