ಸುಭಾಷಿತ :

Friday, November 22 , 2019 6:45 AM

ಹುಡುಗರು ಪ್ರಪೋಸ್ ಮಾಡಿದ್ರೆ ‘ನಾಗಿಣಿ’ ಏನ್ಮಾಡ್ತಿದ್ರು..! : ‘ಬಿಗ್ ಬಾಸ್’ ಮನೆಯಲ್ಲಿ ದೀಪಿಕಾ ದಾಸ್ ಹೇಳಿದ್ದೇನು..?


Friday, October 18th, 2019 9:45 pm

ಸಿನಿಮಾಡೆಸ್ಕ್: ಕನ್ನಡ ಕಿರುತೆರೆ ವೀಕ್ಷಕರ ಮೆಚ್ಚಿನ ರಿಯಾಲಿಟ್ ಶೋ ಬಿಗ್ ಬಾಸ್  ಶೋ ಆರಂಭವಾಗಿ ಒಂದು ವಾರ ಆಗುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಹೆಚ್ಚು ರಂಜಿಸುತ್ತಿರುವ ಎಪಿಸೋಡ್ ಕಳೆದ 2 ದಿನದಿಂದ ಪ್ರೇಕ್ಷಕರನ್ನು ಅಳಿಸುತ್ತಿದೆ. ಹೌದು, ನಿನ್ನೆಯ ಎಪಿಸೋಡ್ ನಲ್ಲಿ ಅಮ್ಮನ ಬಗ್ಗೆ ಮಾತನಾಡಿ ಬಿಗ್ ಬಾಸ್ ಸ್ಪರ್ಧಿ ಪತ್ರಕರ್ತ ರವಿ ಬೆಳಗೆರೆ ಬಿಕ್ಕಿ ಬಿಕ್ಕಿ ಅತ್ತಿದ್ದರು.

ನಿನ್ನೆ ಎಪಿಸೋಡ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದ ರವಿ ಬೆಳಗೆರೆ “ ನಮ್ಮ ಅಮ್ಮ ಇಲ್ಲ ಕಣ್ರೀ.. ಒಂದು ದಿವಸಕ್ಕಾದ್ರು ಅವಳು ಬಂದು ನೋಡಿದ್ರೆ ಸಾಕಿತ್ತು..’ ಎಂದು ಹೇಳುತ್ತಲೇ ರವಿ ಕಣ್ಣೀರಾಗಿದ್ದರು.. ಅವರ ಸಂಕಟವನ್ನು ಕಂಡ ಉಳಿದ ಸ್ಪರ್ಧಿಗಳ ಕಣ್ಣಂಚಲ್ಲೂ ನೀರು ತುಂಬಿಕೊಂಡಿತ್ತು. ಇದಾದ ಬಳಿಕ ಸಹ ಸ್ಪರ್ಧಿಗಳು ಕೂಡ ತಮ್ಮ ಅಪ್ಪ ಅಮ್ಮನನ್ನು ನೆನೆದು ಕಣ್ಣೀರಿಟ್ಟಿದ್ದರು.

ಇಂದಿನ ಎಪಿಸೋಡ್ ನಲ್ಲಿ ವಾಸುಕಿ ವೈಭವ್, ಪ್ರಿಯಾಂಕಾ, ದೀಪಿಕಾ ದಾಸ್ ಕೂಡ ತಮ್ಮ ತಂದೆ ತಾಯಿಯ ಬಗ್ಗೆ ಮಾತನಾಡಿದ್ದಾರೆ, ಇಂದಿನ ಎಪಿಸೋಡ್ ನಲ್ಲಿ ಮಾತನಾಡಿದ ದೀಪಿಕಾ ದಾಸ್ ಮಾತನಾಡಿದ್ದು ‘ ನನಗೆ ಅಪ್ಪ ಸ್ಪೂರ್ತಿ, ಅಮ್ಮ ಶಕ್ತಿ.  ಅಪ್ಪನ ಆದರ್ಶಗಳನ್ನು ಜೀವನದಲ್ಲಿ ರೂಪಿಸಿಕೊಂಡು ಹೋಗುತ್ತಿದ್ದೇನೆ, ನನಗೆ ಮೊದಲು ಯಾರೂ ಫ್ರೆಂಡ್ಸ್ ಇರಲಿಲ್ಲ, ಯಾಕೆ ಅಂದ್ರೆ ಅಮ್ಮನೇ ನನಗೇ ಫ್ರೆಂಡ್ ಆಗಿದ್ದರು. ಯಾರಾದ್ರೂ ಫ್ರಪೋಸ್ ಮಾಡಿದ್ರೆ ಅಮ್ಮನ ಬಳಿ ಹೇಳುತ್ತಿದ್ದೆ ಎಂದು ದೀಪಿಕಾ ದಾಸ್ ಹೇಳಿದ್ದಾರೆ.

ಇನ್ನೂ ಬಳಿಕ ಮಾತನಾಡಿದ ಪ್ರಿಯಾಂಕಾ ಅಪ್ಪನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.  ತಂದೆ ಸಪೋರ್ಟ್ ನಿಂದ ನಾನು  ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟೆ ಎಂದು ಅಪ್ಪನನ್ನು ನೆನೆದು ಪ್ರಿಯಾಂಕಾ ಭಾವುಕರಾದರು. ನಮ್ಮ ಡ್ಯಾಡಿ ಜೀನ್ಸ್ ಧರಿಸಿ ಫಾರಿನ್ ಹೋಗ್ತಿದ್ರು,,ಅಪ್ಪ ಇಲ್ಲದ ಜೀವನ ಈಗಲೂ ನನಗೆ ಕಷ್ಟವಾಗುತ್ತಿದೆ, ಅಪ್ಪನೇ ನನಗೆಲ್ಲಾ,,ಅವರೇ ದೇವರು ಎಂದು ಪ್ರಿಯಾಂಕಾ ಭಾವುಕರಾದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions