‘ಡಿಯರ್ ಕಾಮ್ರೇಡ್’ ಗಾಗಿ ಮತ್ತೊಮ್ಮೆ ಲಿಪ್ ಲಾಕ್ ಮಾಡಿದ ವಿಜಯ್ -ರಶ್ಮಿಕಾ


Monday, March 18th, 2019 9:52 am

ಸಿನಿಮಾ ಡೆಸ್ಕ್ : ಗೀತಗೋವಿಂದಂ ಸಿನಿಮಾದ ಸಿನಿ ರಸಿಕರ ಮನ ಗೆದ್ದ ವಿಜಯ್ ದೇವರಕೊಂಡ ​-ರಶ್ಮಿಕಾ ಮಂದಣ್ಣ ಜೋಡಿ ಮತ್ತೆ ತೆರೆ ಮೇಲೆ ಒಂದಾಗಿದ್ದು, ಚಿತ್ರಕ್ಕೆ ‘ಡಿಯರ್ ಕಾಮ್ರೇಡ್’ ಎನ್ನುವ ಹೆಸರನ್ನಿಡಲಾಗಿದೆ.

ಟಾಲಿವುಡ್​​ನ ಬಹುನಿರೀಕ್ಷಿತ ಈ ಸಿನಿಮಾದ ಟೀಸರ್, ತೆಲುಗು,ತಮಿಳು,ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ. ಹೊಸ ಚಿತ್ರದ ಟೀಸರ್​ ಮತ್ತೊಂದು ಸಕ್ಸಸ್ ಚಿತ್ರ ನೀಡುವ ಸೂಚನೆ ನೀಡುತ್ತಿದೆ.

ಇನ್ನು ಗೀತಗೋವಿಂದಂ ಚಿತ್ರದಲ್ಲಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದ ಈ ಜೋಡಿ ಈ ಚಿತ್ರದಲ್ಲಿ ಮತ್ತೆ ಲಿಪ್​ಲಾಕ್ ಮಾಡಿದ್ದಾರೆ. ಟೀಸರ್​ನಲ್ಲಿ ವಿಜಯ್ ರೌಡಿಗಳಿಗೆ ಹೊಡೆಯುತ್ತಾ ಕೊನೆಯಲ್ಲಿ ನಾಯಕಿ ರಶ್ಮಿಕಾಳಿಗೆ ಕಿಸ್​ ಮಾಡುವುದರೊಂದಿಗೆ ಟೀಸರ್ ಕೊನೆಯಾಗುತ್ತದೆ.

ಈ ಚಿತ್ರವನ್ನು ಭರತ್​ ಕಮ್ಮ ಕಥೆ ಬರೆದು ನಿರ್ದೇಶಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ಹಾಗೂ ಬಿಗ್​ ಬೆನ್ ಸಿನಿಮಾಸ್ ‘ಡಿಯರ್ ಕಾಮ್ರೇಡ್’ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿ ಮಾಡಿದೆ. ಮೇ 31ರಂದು ಚಿತ್ರ ರಿಲೀಸಾಗಲಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions