ಒಂದು ಚಮಚ ಹಾಲಿನಿಂದ ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್, ಕಲೆ ಎಲ್ಲವೂ ನಿವಾರಣೆ


Saturday, December 8th, 2018 1:54 pm

ಸ್ಪೆಷಲ್ ಡೆಸ್ಕ್ : ತುಂಬಾ ಹೊತ್ತು ಬಿಸಿಲಿನಲ್ಲಿದ್ದರೆ ಅಥವಾ ಸರಿಯಾಗಿ ನಿದ್ರೆ ಮಾಡದೇ ಇದ್ದರೆ, ಸುಸ್ತಾಗಿದ್ದಾರೆ ಕಣ್ಣಿನ ಸುತ್ತಲೂ ಡಾರ್ಕ್ ಸರ್ಕಲ್ ಉಂಟಾಗುತ್ತದೆ. ಈ ಕಲೆ ನಿವಾರಣೆಗೆ ಏನೋ ಕ್ರೀಮ್ ಹಚ್ಚಬೇಕೆಂದೇನೂ ಇಲ್ಲ. ಬದಲಾಗಿ ಒಂದು ಚಮಚ ಹಾಲು ಇದ್ದರೆ ಸಾಕು.

ಹಾಲನ್ನು ಈ ರೀತಿಯಾಗಿ ಬಳಕೆ ಮಾಡಿ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತದೆ.

ಹಾಲು ಮತ್ತು ರೋಸ್ ವಾಟರ್ ನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಒಂದು ಹತ್ತಿ ಉಂಡೆ ತೆಗೆದುಕೊಂಡು ಅದನ್ನು ಈ ಮಿಶ್ರಣದಲ್ಲಿ ಹಾಕಿ ಅದನ್ನು ಸ್ವಲ್ಪ ಹಿಂಡಿ ಕಣ್ಣಿನ ಕೆಳಭಾಗದಲ್ಲಿ ಇಟ್ಟುಬಿಡಿ. ಹೀಗೆ ಸುಮಾರು 20 ನಿಮಿಷ ಹಾಗೆ ಬಿಡಿ. ಬಳಿಕ ತಣ್ಣೀರು ಬಳಸಿಕೊಂಡು ತೊಳೆಯಿರಿ

ರಾತ್ರಿ ವೇಳೆ ಒಂದು ಹಿಡಿ ಬಾದಾಮಿಯನ್ನು ನೀರಿನಲ್ಲಿ ನೆನೆಸಲು ಹಾಕಿ. ಬೆಳಗ್ಗೆ ಎದ್ದ ಬಳಿಕ ಇದನ್ನು ತೆಗೆದು ರುಬ್ಬಿ ಪೇಸ್ಟ್ ಮಾಡಿ. ಇದಕ್ಕೆ ½ ಚಮಚ ಹಸಿ ಹಾಲು ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕಣ್ಣಿನ ಕೆಳಭಾಗದಲ್ಲಿ ಇರುವಂತಹ ಕಪ್ಪು ವೃತ್ತಗಳ ಮೇಲೆ ಹಚ್ಚಿಕೊಳ್ಳಿ.

ಹಾಲನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಇದನ್ನು ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಕಣ್ಣಿನ ಕೆಳಭಾಗದ ಕಪ್ಪು ವೃತ್ತಗಳ ಮೇಲೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions