ಸುಭಾಷಿತ :

Monday, September 23 , 2019 3:55 PM

ಮೊಸರು ಸೇವನೆ ಕುರಿತು ನೀವು ತಿಳಿದುಕೊಳ್ಳಲೇಬೇಕು ಈ ಅಂಶಗಳನ್ನು…


Saturday, June 15th, 2019 12:53 pm

ಸ್ಪೆಷಲ್ ಡೆಸ್ಕ್ : ಮೊಸರು ಆರೋಗ್ಯಕ್ಕೇನೂ ಒಳ್ಳೆಯದೇ ಆದರೆ ಅದು ನೀವು ತಿನ್ನುವ ಸಮಯದ ಮೇಲೆ ಅವಲಂಭಿಸಿರುತ್ತದೆ. ಯಾಕೆಂದರೆ ನೀವು ರಾತ್ರಿ ಹೊತ್ತು ಮೊಸರು ಸೇವಿಸಿದರೆ ಅದರಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಆದುದರಿಂದ ಮೊಸರು ಯಾವಾಗ ಸೇವನೆ ಮಾಡಬೇಕು? ಯಾವ ರೀತಿ ಸೇವನೆ ಮಾಡಿದರೆ ಉತ್ತಮ ನೋಡೋಣ…

ರಾತ್ರಿ ಹೊತ್ತು ಮೊಸರು ಸೇವನೆ ಬೇಡ. ಇದರಿಂದ ಕೆಮ್ಮು- ಶೀತ ಉಂಟಾಗುತ್ತದೆ.
ಆಯುರ್ವೇದಲ್ಲಿ ಹೇಳೀರುವಂತೆ ರಾತ್ರಿ ಹೊತ್ತು ಮೊಸರು ಸೇವಿಸುವುದರಿಂದ ಲೋಳೆ ವೃದ್ಧಿಯಾಗುತ್ತದೆ. ಸೇವಿಸಲೇಬೇಕು ಎಂದಾದರೆ ಮಜ್ಜಿಗೆ ಸೇವನೆ ಮಾಡಿ.
ಬೆಳಗ್ಗೆ ಮೊಸರು ಸೇವನೆ ಮಾಡುವುದಾದರೆ ಅದನ್ನು ಸಕ್ಕರೆ ಜೊತೆ ಸೇವಿಸಿ. ಆದರೆ ರಾತ್ರಿ ಹೊತ್ತು ಸೇವನೆ ಮಾಡುವಾಗ ಸಕ್ಕರೆ ಜೊತೆಗೆ ಸ್ವಲ್ಪ ಪೆಪ್ಪರ್‌ ಬೆರೆಸಿ ಸೇವನೆ ಮಾಡಿ. ಇದರಿಂದ ಜೀರ್ಣಕ್ರಿಯೆ ಸಕ್ರಿಯವಾಗುತ್ತದೆ.
ಯಾವತ್ತೂ ಬಿಸಿ ಮೊಸರು ಸೇವನೆ ಮಾಡಬೇಡಿ.

ಬೇರೆ ಯಾವೆಲ್ಲ ವಿಧಗಳ ಮೂಲಕ ಮೊಸರು ಸೇವಿಸಬಹುದು ನೋಡೋಣ..
ಮೊಸರನ್ನ ಒಂದು ಉತ್ತಮ ಆಹಾರವಾಗಿದೆ. ಇದು ದೇಹಕ್ಕೆ ಅತ್ಯಂತ ಆರೋಗ್ಯಕರವಾಗಿದೆ.
ಮೊಸರಿಗೆ ಒಂದು ಚಮಚ ಸಕ್ಕರೆ ಹಾಕಿ ಸೇವನೆ ಮಾಡಿದರೆ ಉತ್ತಮ.
ಕಾಫಿ, ಟೀ ಬದಲು ಮಜ್ಜಿಗೆ ಅಥವಾ ಲಸ್ಸಿ ಸೇವನೆ ಮಾಡಿ.
ರಾಯಿತ ಭಾರತದ ಕಾಮನ್‌ ಫುಡ್‌ ಆಗಿದೆ. ಸೌತೆಕಾಯಿ, ಈರುಳ್ಳಿ, ಟೊಮ್ಯಾಟೊ, ದಾಳಿಂಬೆ ಹಾಕಿ ಇದನ್ನು ತಯಾರಿಸಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions